ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೈವ್ ಸುದ್ದಿ ಮಾಡುವಾಗ ಕುಸಿದ ಸೇತುವೆ : ಪತ್ರಕರ್ತೆ ಬಚಾವ್

ಪರ್ತಕರ್ತರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ನಿರ್ವಹಿಸುತ್ತಿರುತ್ತಾರೆ ಕೊಂಚ ಯಾಮಾರಿದ್ರು ಅವರ ಜೀವಕ್ಕೆ ಗ್ಯಾರಂಟಿ ನೀಡಲು ಸಾಧ್ಯವಿಲ್ಲ.ಲೈವ್ ರಿಪೋರ್ಟಿಂಗ್ ಸುಲಭದ ಕೆಲಸವಲ್ಲ. ಯಾಕೆಂದರೆ, ಕೆಲವೊಮ್ಮೆ ಅನಿರೀಕ್ಷಿತ ಸವಾಲುಗಳನ್ನು ಇಲ್ಲಿ ಎದುರಿಸಬೇಕಾಗುತ್ತದೆ.

ಅದರಲ್ಲೂ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ವರದಿ ಮಾಡುವುದು ನಿಜಕ್ಕೂ ಸವಾಲಿನ ಕೆಲಸ.ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಒಮ್ಮೊಮ್ಮೆ ಭಯಾನಕ ಪರಿಸ್ಥಿತಿಗಳು ಧುತ್ತನೇ ಬಂದು ಎದುರಾಗುತ್ತವೆ. ಇದಕ್ಕೆ ಸಾಕ್ಷಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ.

ಈ ದೃಶ್ಯವನ್ನು ನೋಡಿದಾಗ ಒಂದು ಕ್ಷಣ ಮೈ ಜುಮ್ಮ ಎನ್ನುತ್ತದೆ.ಇದು ವರದಿಗಾರ್ತಿಯೊಬ್ಬರು ಎದುರಿಸಿದ್ದ ಭಯಾನಕ ಸನ್ನಿವೇಶದ ದೃಶ್ಯ.ವಿಪರೀತ ಪ್ರವಾಹದ ಬಗೆಗಿನ ವರದಿಗಾರಿಕೆಗೆಂದು ತೆರಳಿದ್ದ ಈ ಸಾಹಸಿ ಪತ್ರಕರ್ತೆ ಸೇತುವೆ ಬಳಿ ನಿಂತು ನೇರ ಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ದರು.

ಪ್ರವಾಹದಿಂದ ಸೇತುವೆ ಕುಸಿಯುವ ಹಂತದಲ್ಲಿದೆ ಎಂದು ಇವರು ತೋರಿಸಿಕೊಡುತ್ತಿದ್ದರು. ಇದಾಗಿ ಅರೆಕ್ಷಣದಲ್ಲಿ ಈ ಸೇತುವೆ ಕುಸಿದಿದೆ...!ಅದೃಷ್ಟವಶಾತ್ ಈ ವರದಿಗಾರ್ತಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.ಪಾಕ್ಸ್ 46 ಚಾನೆಲ್ ನ ವರದಿಗಾರ್ತಿ ಅಂಬರ್ ರಾಬರ್ಟ್ಸ್ ಈ ದಿಟ್ಟ ಪತ್ರಕರ್ತೆ.

ಇನ್ನು ಈ ಭೀಕರ ಘಟನೆಯ ಬಳಿಕವೂ ರಾಬರ್ಟ್ಸ್ ತಮ್ಮ ನೇರಪ್ರಸಾರವನ್ನು ಮುಂದುವರಿಸಿದ್ದರು. ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

Edited By : Manjunath H D
PublicNext

PublicNext

19/11/2020 06:29 pm

Cinque Terre

104.31 K

Cinque Terre

7

ಸಂಬಂಧಿತ ಸುದ್ದಿ