ಕನಕಪುರ: ಸೋಮವಾರ ಬೆಳಗಿನ ಜಾವ 4 ಗಂಟೆಯಿಂದ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ರಾಮನಗರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಭಾನುವಾರ ರಾತ್ರಿ ಸುರಿದು ನಿಂತಿದ್ದ ಮಳೆ ಮತ್ತೆ 4 ಗಂಟೆಗೆ ಶುರುವಾಗಿ ನಿಲ್ಲುವ ಲಕ್ಷಣಗಳು ಕಾಣದೇ ಇದ್ದುದ್ದರಿಂದ ಜೊತೆಗೆ ಶಾಲೆಗಳ ಬಳಿ ನೀರು ನಿಂತಿದ್ದರಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನಾಳೆಯಿಂದ ಹಬ್ಬದ ಸೀಸನ್ ಪ್ರಾರಂಭವಾಗಲಿದ್ದು ಮಾರುಕಟ್ಟೆ ಬಳಿಯೂ ಮಳೆಯಿಂದಾಗಿ ಜನರು ಬರದೇ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರು ಸಹ ಆದಾಯ ಖೋತಾ ಆಗಲಿದೆ ಎನ್ನುವ ಆತಂಕವಿದೆ ಎನ್ನುತ್ತಾರೆ.
PublicNext
29/08/2022 01:33 pm