ಕೋಲಾರ: ಕೋಲಾರದಲ್ಲಿ ಇಂದು ರಾತ್ರಿ 8:37ರ ಸುಮಾರಿಗೆ ಸಣ್ಣದಾಗಿ ಭೂಮಿ ಕಂಪಿಸಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಇಂದು ಭಾನುವಾರದ ರಜೆಯಾಗಿರುವ ಹಿನ್ನೆಲೆಯಲ್ಲಿ ಬಹುತೇಕರು ಮನೆಯಲ್ಲೇ ಇದ್ದರು. ಕೆಲವರು ಟಿವಿ ವೀಕ್ಷಣೆ ಮಾಡುತ್ತಿದ್ದರೆ, ಇನ್ನೂ ಕೆಲವರು ಅಡುಗೆ ಮಾಡುವಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಮೂರು ಸೆಕೆಂಡ್ ಕಾಲ ಭೂಮಿ ಕಂಪಿಸಿದೆ. ಭೂಮಿ ಕಂಪಿಸಿದ್ದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕ ಉಂಟಾಗಿದೆ. ಕೆಲವರು ಮನೆಯಿಂದ ಹೊರ ಬಂದಿದ್ದಾರೆ. ಕಂಪನ ನಿಂತ ನಂತರದಲ್ಲಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
PublicNext
20/12/2020 10:28 pm