ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಇಂದು ಸಂಜೆ 7.30ರಿಂದ ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಜೋರುಗಾಳಿಯೊಂದಿಗೆ ಸಿಡಿಲು, ಮಿಂಚು ಆರ್ಭಟ ದೊಂದಿಗೆ ಶುರುವಾದ ಮಳೆ ರಾತ್ರಿವರೆಗೂ ಮುಂದುವರಿದಿತ್ತು.
ಬಿರುಮಳೆ, ಗಾಳಿಗೆ ವಿದ್ಯುತ್ ವ್ಯವಸ್ಥೆ ಕೂಡ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು, ಮೂರು ದಿನದಿಂದ ಮುಲ್ಕಿಯಲ್ಲಿ ಒಣಹವೆಯ ವಾತಾವರಣವಿದ್ದು, ಮಳೆಯಿಂದಾಗಿ ಭೂಮಿ ತಂಪಾಗಿ ಮಣ್ಣಿನ ವಾಸನೆ ಬರುತ್ತಿತ್ತು. ಜೊತೆಗೆ ಭಾರೀ ಸಿಡಿಲಿನಿಂದ ಕೆಲವು ಕಡೆ ಹಾನಿಯುಂಟಾದ ಸಾಧ್ಯತೆಗಳಿದ್ದು, ಇನ್ನಷ್ಟೇ ತಿಳಿದು ಬರಬೇಕಾಗಿದೆ. ಬುಧವಾರ ಅನೇಕ ಕಡೆ ಮದುವೆ ಸಮಾರಂಭಗಳು ನಡೆಯಲಿದ್ದು, ಮಂಗಳವಾರ ರಾತ್ರಿ ಮಳೆ ಸುರಿದಿದ್ದರಿಂದ ಮನೆಯಲ್ಲಿ ನಡೆಯುವ ಮೆಹಂದಿಗೆ ಅಡಚಣೆ ಉಂಟಾಗಿದೆ.
PublicNext
08/12/2020 08:51 pm