ಮಂಡ್ಯ- ದಾಖಲೆ ನಿರ್ಮಿಸಲು ಹುಂಬತನ ಮಾಡಿದ ಹುಡುಗರು ಈಗ ಕೇಸ್ ದಾಖಲಾಗುವಂತೆ ಮಾಡಿಕೊಂಡಿದ್ದಾರೆ. ಒಂದೇ ಎತ್ತಿನ ಗಾಡಿಯಲ್ಲಿ ಬರೋಬ್ಬರಿ 15 ಟನ್ ಕಬ್ಬು ತುಂಬಿ ಎತ್ತುಗಳಿಂದ ಎಳೆಸಿ ದಾಖಲೆ ನಿರ್ಮಿಸಿದ್ದ ಯುವಕರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಎಚ್ ಮಲ್ಲಿಗೆರೆ ಗ್ರಾಮದಲ್ಲಿ ಈ ರೀತಿ ಕಬ್ಬು ತುಂಬಿದ ಎತ್ತಿನಗಾಡಿ ಎಳೆಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. 15 ಟನ್ ಕಬ್ಬು ಹೊತ್ತ ಎತ್ತಿನಗಾಡಿಯನ್ನು ಎತ್ತುಗಳಿ ಮೂರು ಕಿಲೋ ಮೀಟರ್ ಎಳೆದು ದಾಖಲೆ ನಿರ್ಮಿಸಿದ್ದವು.
ಈಗ ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆ ಅಡಿಯಲ್ಲಿ ಈ ದಾಖಲೆ ನಿರ್ಮಾಣದ ನೇತೃತ್ವ ವಹಿಸಿದ್ದ ಯುವಕ ಚಿರಂತ್ ಹಾಗೂ ಇತರರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
PublicNext
24/11/2020 07:11 pm