ನಾವು ಪ್ರಕೃತಿಯಿಂದ ನೋಡಿ ಕಲಿಯುವಂತದ್ದು ಸಿಕ್ಕಾಪಟ್ಟೆ ಇದೆ. ಅದರಲ್ಲೂ ಮಾತೇ ಬಾರದ ಪ್ರಾಣಿ ಜಗತ್ತಿನಿಂದ ನಾವು ಕಲಿಯುವುದು ಅಗಾಧವಾಗಿದೆ. ಅದಕ್ಕೆ ಬೆಸ್ಟ್ ಉದಾಹರಣೆ ಇಲ್ಲಿದೆ ನೋಡಿ. ತನ್ನ ಪಾಡಿಗೆ ತಾನು ತಣ್ಣಗೆ ಈಜುವ ಹಂಸವನ್ನ ಕಂಡರೆ ಮೀನುಗಳಿಗೆ ಭಯ ಅಂತಾರೆ. ಆದ್ರೆ ಇಲ್ಲಿ ತದ್ವಿರುದ್ಧವಾಗಿ ಹಂಸವೇ ಆ ಮೀನುಗಳಿಗೆ ಊಟ ಹಾಕುತ್ತಿದೆ. ಹಂಸವನ್ನೇ ಹಿಂಬಾಲಿಸಿಕೊಂಡು ಬರುವ ಮೀನುಗಳು ಹಂಸ ನೀಡುವ ಆಹಾರಕ್ಕಾಗಿ ಚಡಪಡಿಸಿ ಹಾತೊರೆಯುತ್ತವೆ. ತನ್ನ ಕೊಕ್ಕಿನಿಂದ ಒಂದೊಂದೇ ಮೀನುಗಳಿಗೆ ಆಹಾರ ನೀಡುತ್ತಿದೆ. ಸದ್ಯ ನೆಟ್ಟಿಗರ ನೋಟ ಈ ವಿಡಿಯೋ ಮೇಲೆ ನೆಟ್ಟಿದೆ. ಹೀಗಾಗಿ ಈ ವಿಡಿಯೋ ಈಗ ಟ್ವಿಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
22/11/2020 05:52 pm