ಮುಂಬೈ: ಒಂಬತ್ತು ತಿಂಗಳಲ್ಲಿ ಬರೋಬ್ಬರಿ 3 ಸಾವಿರ ಕಿ.ಮೀ. ಜರ್ನಿ ಮಾಡಿ ಹುಲಿಯೊಂದು ದಾಖಲೆ ಬರೆದಿದೆ. ಭಾರತದ ಯಾವ ಹುಲಿಯೂ ಇಂತಹ ಮಾಡಿರದ ಸಾಧನೆ ಮಾಡಿಲ್ಲ.
ಮೂರೂವರೆ ವರ್ಷದ ಈ ಹುಲಿಗೆ ಅರಣ್ಯಾಧಿಕಾರಿಗಳು ವಾಕರ್ ಎಂದು ಇದಕ್ಕೆ ನಾಮಕರಣ ಮಾಡಿದ್ದಾರೆ. ಇದು ಮಹಾರಾಷ್ಟ್ರದ ಏಳು ಜಿಲ್ಲೆಗಳನ್ನು ದಾಟಿ ಪಕ್ಕದ ತೆಲಂಗಾಣದಲ್ಲಿ ಓಡಾಡಿ ಬಂದಿರುವ ವಾಕರ್ ಕ್ರಮಿಸಿರುವ ಒಟ್ಟು ದೂರ ಬರೋಬ್ಬರಿ ಮೂರು ಸಾವಿರ ಕಿ.ಮೀ ಎಂದಿದ್ದಾರೆ.
ವಾಕರ್ 2019ರ ಜೂನ್ ತಿಂಗಳಿನಲ್ಲಿ ಮಹಾರಾಷ್ಟ್ರದ ಅಭಯಾರಣ್ಯದಿಂದ ಹೊರಟು 2020ರ ಮಾರ್ಚ್ ತಿಂಗಳಿನಲ್ಲಿ ಅಂದರೆ ಒಂಬತ್ತು ತಿಂಗಳು ಬಳಿಕ ಮಹಾರಾಷ್ಟ್ರಕ್ಕೆ ಮರಳಿ ಬಂದಿದೆ. ಈ ಒಂಬತ್ತು ತಿಂಗಳ ಅವಧಿಯಲ್ಲಿ ಇದು ಕ್ರಮಿಸಿರುವ ದೂರ ಮೂರು ಸಾವಿರ ಕಿಲೋಮೀಟರ್. ಈ ಹುಲಿಗೆ ಕಾಲರ್ ಐಡಿ ಅಳವಡಿಸಲಾಗಿತ್ತು. ಅದರ ಮೂಲಕ ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚಲಾಗಿದೆ.
ಸದ್ಯ 205 ಚ.ಕಿ.ಮೀ ವ್ಯಾಪ್ತಿಯ ಜ್ಞಾನಗಂಗಾ ಅಭಯಾರಣ್ಯದಲ್ಲಿ ನೆಲೆಸಿರುವ ವಾಕರ್ ಈ ಭಾಗದಲ್ಲಿ ನೆಲೆಸಿರುವ ಏಕೈಕ ಹುಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
PublicNext
19/11/2020 03:23 pm