ಚಿಕ್ಕಮಗಳೂರು: ರಾಜ್ಯದ ಎಲ್ಲಾ ಕಡೆ ಜೋರು ಮಳೆಯಾಗ್ತಿದೆ. ನದಿ ಮತ್ತು ಹಳ್ಳಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸುತ್ತಾಮುತ್ತ ತುಂಗಾ ನದಿ ಭೋರ್ಗರೆದು ಹರಿಯುತ್ತಿದೆ. ಆಗುಂಬೆಯ ಕಪ್ಸಾಗುಡ್ಡದ ತುಂಗಾ ನದಿಯ ಒಂದು ಭಾಗದ ಹಳ್ಳ ಅಪಾಯದ ಮಟ್ಟಮೀರಿ ಹರಿಯುತ್ತಿದೆ.
ಶೃಂಗೇರಿ ತಾಲೂಕಿನ ಮಾಗಳಬೈಲು ಸುತ್ತಮುತ್ತ ಪ್ರದೇಶಗಳಲ್ಲಿ ನಾಟಿ ಮಾಡಿದ್ದ ಭತ್ತ, ಬಾಳೆ, ಕಾಳುಮೆಣಸು ಅಡಿಜೆ ಸೇರಿದಂತೆ ಅಗತ್ಯ & ವಾಣಿಜ್ಯ ಬೆಳಗಳೆಲ್ಲಾ ನೀರಲ್ಲಿ ಕೊಚ್ಚಿಹೋಗಿವೆ. ಒಳ್ಳೆ ಮಳೆಯಿಂದ ಬೆಳೆ ನಾಟಿ ಮಾಡಿದ್ದ ರೈತನ ಶ್ರಮ ನದಿನೀರಲ್ಲಿ ಕೊಚ್ಚಿಹೋಗಿದೆ. ನದಿಪಾತ್ರದ ಇಕ್ಕೆಲಗಳ ನೂರಾರು ಎಕರೆ ಬೆಳೆ ಅತಿಯಾದ ನೀರಿಂದ ನಾಶವಾಗಿದ್ದು, ರೈತ ಕಂಗಾಲಾಗಿದ್ದಾನೆ..
PublicNext
03/09/2022 07:26 am