ಬೆಳಗಾವಿ: ಜಿಲ್ಲೆಯ ಕಾಡಂಚಿನ ಗ್ರಾಮಕ್ಕೆ ಆನೆಗಳು ಲಗ್ಗೆ ಹಾಕಿ ಕಟಾವಿಗೆ ಬಂದ ಭತ್ತ, ಕಬ್ಬು, ರಾಗಿ ಸೇರಿದಂತೆ ಲಕ್ಷಾಂತರ ರೂ ಬೆಳೆ ನಾಶವಾಗಿದೆ.
ಜಿಲ್ಲೆಯ ದಾಮನೆ ಎಸ್ ಬೈದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂರು ಆನೆಗಳ ಪೈಕಿ ಎರಡು ಆನೆಗಳನ್ನು ಗ್ರಾಮಸ್ಥರೇ ಕಾಡಿಗೆ ಅಟ್ಟಿದ್ದಾರೆ.
ಒಂಟಿ ಸಲಗ ಒಂದು ಮರಳಿ ಕಾಡಿಗೆ ಹೋಗದೆ ಒಂದು ವಾರದಿಂದ ಜಮೀನಲ್ಲೇ ಠಿಕಾಣಿ ಹೂಡಿದೆ. ಒಂಟಿ ಸಲಗವನ್ನು ಕಾಡಿಗೆ ಅಟ್ಟಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.
ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿದ್ರು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲಾ, ಬೆಳೆ ಹಾನಿ ಪರಿಹಾರ ನೀಡಿ ಆನೆಯನ್ನು ಕಾಡಿಗೆ ಕಳಿಸಲು ಒತ್ತಾಯಿಸುತ್ತಿದ್ದಾರೆ ರೈತರು.
PublicNext
28/11/2021 10:19 am