ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ರೈತರು ಬೆಳೆದ ಬೆಳೆ ನೀರು ಪಾಲಗಿ ಹೋಗಿವೆ.
ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದ ಈರಪ್ಪ ಕುಂಬಾರ ಅವರು ಬೆಳೆದ ಹತ್ತಿ ಹೊಲದಲ್ಲಿ ನೀರು ತುಂಬಿ ನದಿಯಂತಾಗಿದ್ದು, ಹತ್ತಿ ಬೆಳೆ ಸಂಪೂರ್ಣ ನಾಶವಾಗಿ ಹೋಗಿದೆ.
ಮತ್ತೊಂದೆಡೆ ಗೆದ್ದಲಮರಿ ಗ್ರಾಮದ ರುದ್ರೇಶ್ ಕುಂಬಾರ ಅವರು ಬೆಳೆದ ಭತ್ತದ ಬೆಳೆ ನೀರಲ್ಲಿ ಕೊಚ್ಚಿ ಹೋಗಿದ್ದು, ರೈತರು ಸಂಕಷ್ಟ ಪಡುವಂತಾಗಿದೆ.
ಇಷ್ಟಾದ್ರೂ ರೈತರ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಅಲ್ಲದೇ ಬೆಳೆದ ಬೆಳೆಗಳು ನೀರುಪಾಲಾಗಿದ್ದಕ್ಕೆ ರೈತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಾರೆ ಮಳೆರಾಯನ ಆರ್ಭಟಕ್ಕೆ ರೈತರು ತತ್ತರಿಸಿ ಹೋಗಿದ್ದು, ಸಂಭಂದಪಟ್ಟ ಅಧಿಕಾರಿಗಳು ಪರಿಶೀಲಿಸಿ ನಷ್ಟವಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
-----
ವರದಿ: ಮೌನೇಶ ಬಿ. ಮಂಗಿಹಾಳ,
ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
03/10/2021 01:40 pm