ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಕ್ಕಿಗುಂದ ಗ್ರಾಮದ ಹೊರವಲಯದಲ್ಲಿದ್ದ ಕುರಿ ಹಿಂಡಿಗೆ ರವಿವಾರ ರಾತ್ರಿ ಸುಮಾರು ತೋಳಗಳು ದಾಳಿ ಮಾಡಿದ ಘಟನೆ ಜರುಗಿದೆ. ಸುರಿಯುತ್ತಿರುವ ಮಳೆಯ ಸಂದರ್ಭದಲ್ಲಿ ತೋಳಗಳು ದಾಳಿ ಮಾಡಿವೆ ಎನ್ನಲಾಗುತ್ತಿದೆ. ಇನ್ನು ಕುರಿಗಾಹಿ ದೇವಪ್ಪ ಹನಮಪ್ಪ ಸಾವಿರಕುರಿ ಎಂಬುವರಿಗೆ ಸೇರಿದ ಕುರಿಗಳು.
ಗ್ರಾಮದ ಹೊರವಲಯದಲ್ಲಿ ಕುರಿಹಟ್ಟಿ ಹಾಕಿದ್ದು, ರಾತ್ರಿ ವೇಳೆಯಲ್ಲಿ ತೋಳಗಳು ಕುರಿಗಳ ಮೇಲೆ ದಾಳಿ ಮಾಡಿ,14 ಕುರಿಗಳು ಹಾಗೂ ಆಡುಗಳನ್ನ ತಿಂದು ಹಾಕಿದೆ. ಹೊಟ್ಟೆಪಾಡಿಗಾಗಿ ಜೀವನ ನಡೆಸುತ್ತಿದ್ದ ಬಡಪಾಯಿಗೆ ಸಿಡಿಲು ಬಡಿದಂತಾಗಿದೆ. ದಾಳಿ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾಶ ಗಾಣಿಗೇರ ಹಾಗೂ ಪಶುಸಂಗೋಪನ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
PublicNext
29/08/2022 04:01 pm