ಬೆಂಗಳೂರು: ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಏರ್ಏಷ್ಯಾ ಇಂಡಿಯಾ ವಿಮಾನಕ್ಕೆ ಸಿಡಿಲು ಬಡಿದಿದ್ದ ಕಾರಣ ಹೊರಟ ವಿಮಾನ ಮರಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ.
ಇನ್ನು ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಆದರೆ ವಿಮಾನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 91 ಪ್ರಮಾಣಿಕರನ್ನು ಹೊತ್ತ ಏರ್ ಏಷ್ಯಾ ವಿಮಾನಯಾನದ ಏರ್ ಬಸ್ ಎ320 ಬೆಳಗ್ಗೆ 7.39ರ ಸುಮಾರಿಗೆ ಟೆಕ್ ಆಫ್ ಆಗಿತ್ತು. ಆದರೆ ಆಗಸದ ಮಧ್ಯೆ ವಿಮಾನಕ್ಕೆ ಸಿಡಿಲು ಬಡಿದಿದೆ.
ಏರ್ ಲೈನ್ ವಕ್ತಾರರ ಪ್ರಕಾರ, 'ಏರ್ ಏಷ್ಯಾ ಇಂಡಿಯಾ ಫ್ಲೈಟ್ I5-1576, ಬೆಂಗಳೂರಿನಿಂದ ಹೈದರಾಬಾದ್ ಗೆ ಕಾರ್ಯನಿರ್ವಹಿಸುತ್ತಿತ್ತು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಬೆಂಗಳೂರಿಗೆ ಮರಳಿತು. ನಂತರ ವಿಮಾನಯಾನ ಸಂಸ್ಥೆಯು ನಡೆಸಿದ ತಪಾಸಣೆಯಲ್ಲಿ ವಿಮಾನಕ್ಕೆ ಸಿಡಿಲು ಹೊಡೆದಿರುವುದು ಪತ್ತೆಯಾಗಿದೆ ಎಂದರು.
PublicNext
02/08/2022 10:46 pm