ಬೀದರ್: ಬೀದರ್ ತಾಲೂಕಿನ ಜನವಾಡ ಸಮೀಪ ಮಾಂಜ್ರಾ ನದಿ ಬಳಿ ಚಿರತೆಯೊಂದು ಪತ್ರಕರ್ತನ ಮೇಲೆ ದಾಳಿ ಮಾಡಿದೆ.
ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತ ಸಂಜು ಬುಕ್ಕಾ ಅವರ ಮೇಲೆ ಚಿರತೆ ದಾಳಿ ಮಾಡಿದ್ದು ಬುಕ್ಕಾ ಅವರ ಕಾಲು, ತಲೆ ಹಾಗೂ ಬಾಯಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಬುಕ್ಕಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಶುಕ್ರವಾರ ಬೆಳಿಗ್ಗೆ ನದಿ ತೀರಕ್ಕೆ ವಾಯ ವಿಹಾರಕ್ಕಾಗಿ ತೆರಳಿದ್ದ ವೇಳೆ ಚಿರತೆ ದಾಳಿ ಮಾಡಿದೆ. ಸದ್ಯ ವೈದ್ಯರು ಪತ್ರಕರ್ತ ಸಂಜು ಬುಕ್ಕಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
PublicNext
08/04/2022 06:05 pm