ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತನ ಮೇಲೆ ಮೂರು ಕರಡಿಗಳಿಂದ ಮಾರಣಾಂತಿಕ ದಾಳಿ

ವಿಜಯನಗರ: ರೈತನ ಮೇಲೆ ಎರಗಿದ ಮೂರು ಕರಡಿಗಳು ಮಾರಣಾಂತಿಕವಾಗಿ ಗಾಯಗೊಳಿಸಿವೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು ಈ ವೇಳೆ ಹೊಲದಲ್ಲಿ ಬೆಳೆ ಕಾಯಲು ಹೋಗಿದ್ದ ಎನ್ನಲಾಗಿದೆ.

ರೈತ ಮಹಾಂತೇಶ್ ಮೇಲೆ ಮೂರು ಕರಡಿಗಳು ದಾಳಿ ನಡೆಸಿದ್ದು ದಾಳಿಯ ಪರಿಣಾಮ ಹೊಟ್ಟೆ ಭಾಗ, ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಕರಡಿ ದಾಳಿ ಕಂಡು ಪಕ್ಕದ ಹೊಲದಲ್ಲಿದ್ದ ನಾಗರಾಜ್ ಕೂಗಾಡಿದ ನಂತರ ಮಹಾಂತೇಶನನ್ನು ಕರಡಿಗಳು ಸ್ಥಳದಿಂದ ಓಡಿವೆ. ಗಾಯಾಳು ಮಹಾಂತೇಶ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By : Nagaraj Tulugeri
PublicNext

PublicNext

05/04/2022 12:50 pm

Cinque Terre

34.38 K

Cinque Terre

2

ಸಂಬಂಧಿತ ಸುದ್ದಿ