ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ ಕುಸಿತ ಒಂದೇ ಕುಟುಂಬದ 7 ಜನರ ದುರ್ಮರಣ

ಬೆಳಗಾವಿ : ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮನೆವೊಂದು ಕುಸಿದ ಪರಿಣಾಮ ಒಂದೇ ಮನೆಯ 7 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸಂಭವಿಸಿದೆ.

ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ಮನೆ ನೆನೆದು ಕುಸಿದಿದೆ. ಇನ್ನು ಗ್ರಾಮದ ಭೀಮಪ್ಪ ಖನಗಾವಿ ಕುಟುಂಬದ ಮನೆ ಇದಾಗಿದ್ದು, 7 ವರ್ಷದ ಮಗು ಸೇರಿ 7 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಮೃತರು ಗಂಗವ್ವ ಖನಗಾವಿ ( 50 ) ಸತ್ಯವ್ವ ಖನಗಾವಿ ( 45 ) ಪೂಜಾ ಖನಗಾವಿ ( 8 ) ಸವಿತಾ ಖನಗಾವಿ ( 28 ) ಕಾಶವ್ವ ಕೊಳೆಪ್ಪನವರ್ ( 8 ) ಲಕ್ಷ್ಮೀ ಖನಗಾವಿ (15) ಅರ್ಜುನ ಖನಗಾವಿ ಮೃತಪಟ್ಟ ದುರ್ದೈವಿಗಳು.

ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಎಸ್ ಆರ್ ಎಫ್ ಸಿಬ್ಬಂದಿ ದೌಡಾಯಿಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nirmala Aralikatti
PublicNext

PublicNext

06/10/2021 09:54 pm

Cinque Terre

87.25 K

Cinque Terre

14

ಸಂಬಂಧಿತ ಸುದ್ದಿ