ಭುವನೇಶ್ವರ: ಪೂರ್ವ ಒಡಿಶಾದಲ್ಲಿ ಸೌಮೆನ್ ಬಾಜಪೇಯಿ ಎಂಬ ಹವ್ಯಾಸಿ ಛಾಯಾಗ್ರಾಹಕರೊಬ್ಬರು ಅಪರೂಪದ ಕಪ್ಪು ಹುಲಿಯ ಫೋಟೋ ಕ್ಲಿಕ್ಕಿಸಿದ್ದಾರೆ.
ಜೀನ್ ದೋಷದಿಂದಾಗಿ ಹುಟ್ಟುವ ಇಂತಹ ಹುಲಿಗಳನ್ನು ಮೆಲಾನಿಸ್ಟಿಕ್ ಹುಲಿ ಎಂದು ಕರೆಯಲಾಗುತ್ತದೆ. ಇಂತಹ ಹುಲಿಗಳು ದಪ್ಪ ಕಪ್ಪು ಪಟ್ಟೆಗಳನ್ನು ಹೊಂದಿರುತ್ತವೆ. ಪಟ್ಟೆಗಳ ನಡುವೆ ಚಿಕ್ಕದಾದ ಕಿತ್ತಳೆ ಬಣ್ಣದ ತುಪ್ಪಳವನ್ನು ಕಾಣಿಸುತ್ತವೆ.
ಅಪರೂಪದ ಹುಲಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸೌಮೆನ್ ಬಾಜಪೇಯಿ ಅವರು, 'ಹುಲಿ ಕೆಲವು ಸೆಕೆಂಡ್‌ಗಳ ಕಾಲ ಇದ್ದರೂ ಅದನ್ನು ನೋಡಲು ತುಂಬಾ ಕೃತಜ್ಞನಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
PublicNext
04/11/2020 07:08 pm