ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಹಲವೆಡೆ ಧಾರಾಕಾರ ಮಳೆ- 9 ಮಂದಿ ಬಲಿ, 47 ಕುರಿಗಳು ಸಾವು

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಮಂಗಳವಾರ ಭಾರೀ ಮಳೆ ಆಗಿದ್ದು, ಒಟ್ಟು 9 ಮಂದಿ ಬಲಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸಾವಿಗೀಡಾಗಿದ್ದಾರೆ. ಚಿಕ್ಕಉಳ್ಳಿಗೇರಿ ಗ್ರಾಮದ ಯಲ್ಲವ್ವ ವಿಠ್ಠಲ ಇಂಚಲ (30), ಭಾಗವ್ವ ಮಹಾದೇವಪ್ಪ ಕಡಕೋಳ (50) ಮೃತರು. ರೇಣವ್ವ ರುದ್ರಪ್ಪ ಮಾಳಗಿ (20) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ.

ನವೀಲುತೀರ್ಥ ಗುಡ್ಡದ ಮೇಲೆ ಟೆಂಟ್‌ನಲ್ಲಿದ್ದ 47 ಕುರಿಗಳು ಮೃತಪಟ್ಟಿವೆ. ಹುಕ್ಕೇರಿಯ ಶ್ರೀಕಾಂತ ಅಪ್ಪಣ್ಣ ದಳವಾಯಿ ಅವರಿಗೆ ಸೇರಿದ ಕುರಿಗಳು ಇವಾಗಿವೆ. ಸ್ಥಳಕ್ಕೆ ಸವದತ್ತಿ ಶಾಸಕರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಭೇಟಿ ನೀಡಿ ಪರಿಶೀಲಿಸಿದರು. ಸವದತ್ತಿ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ ರಾಣೆಬೆನ್ನೂರಿನಲ್ಲಿ ಮತ್ತು ಬಳ್ಳಾರಿಯ ಬೈರಾಪುರದಲ್ಲಿ ಸಿಡಿಲಿಗೆ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಕೊಪ್ಪಳದ ಗೆದಗೇರಿ ತಾಂಡಾದಲ್ಲಿ, ವಿಜಯಪುರದ ಹತ್ತಳ್ಳಿಯಲ್ಲಿ, ಬೆಳಗಾವಿಯ ಅಷ್ಟಗಾದಲ್ಲಿ ತಲಾ ಒಬ್ರು ಸಿಡಿಲಿಗೆ ಬಲಿಯಾಗಿದ್ದಾರೆ.

Edited By : Vijay Kumar
PublicNext

PublicNext

20/10/2020 11:50 pm

Cinque Terre

49.62 K

Cinque Terre

0