ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ ನಡೆಯುತ್ತಿದ್ದ ವೇಳೆ ಯದುವೀರ್ ಒಡೆಯರ್ ಭಾಗಿಯಾಗಿದ್ದರು. ಸಾವಿರಾರು ಭಕ್ತರು ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಬೆಳಗ್ಗೆ 7.50 ರಿಂದ 8.10ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯ್ತು. ನಂತರ ರಥಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ನವರಾತ್ರಿ ಮುಗಿದ ಮೊದಲ ಹುಣ್ಣಿಮೆಯಲ್ಲಿ ಚಾಮುಂಡಿ ತಾಯಿಯ ರಥೋತ್ಸವ ನಡೆಯುತ್ತದೆ. ನವರಾತ್ರಿಗಾಗಿ ಮೈಸೂರಿಗೆ ಭಕ್ತರಿಗೆ ಶ್ರೀ ತಾಯಿಯ ದರ್ಶನ ಸಿಗಲೆಂದು ರಾಜವಂಶಸ್ಥರು ಈ ಜಾತ್ರೆಯನ್ನು ಆರಂಭಿಸಿದ್ದರು.
PublicNext
09/10/2022 12:04 pm