ಮೈಸೂರು: ನಗರದ ಅಶೋಕಪುರಂನ ಡಾ. ಬಿ ಆರ್ ಅಂಬೇಡ್ಕರ್ ಪಾರ್ಕ್‌ನಲ್ಲಿ ನಡೆದ ಮಹಿಷ ದಸರಾಗೆ ಮಹಿಷನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹಿಷ ದಸರಾದ ಶುಭಾಶಯಗಳನ್ನ ಕೋರಿದ ಭಾನು ಪ್ರಕಾಶ್ ಸ್ವಾಮೀಜಿ, ಚಾಮುಂಡಿ ಬೆಟ್ಟದಲ್ಲಿ ದಸಾರಾ ಉದ್ಘಾಟನೆ ಹಿನ್ನಲೆ ಮಹಿಷನ ಪುತ್ಥಳಿ ಮುಚ್ಚಿರುವುದನ್ನು ಖಂಡಿಸಿದರು. ಪುತ್ಥಳಿ ಮುಚ್ಚಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಚಾಮುಂಡಿ ದರ್ಶನಕ್ಕೆ ಬರುತ್ತೇವೆ. ಸೋಮವಾರವೂ ಬರುತ್ತೇವೆ. ಒಂದು ವೇಳೆ ನಮ್ಮನ್ನ ಬಿಡದಿದ್ದರೆ ಅಸ್ಪೃಶ್ಯತೆ ಆಚರಣೆ ಮಾಡಿದಂತೆ. ನಾವು ಈ ನೆಲದ ವಾರಸುದಾರರು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಪ್ರೊ. ಕೆ ಎಸ್ ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ಇತಿಹಾಸ ತಜ್ಞ ಪ್ರೊ ನಂಜೇರಾಜ ಅರಸ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
PublicNext
26/09/2022 08:15 am