ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ತಂದ್ರೆಕೊಪ್ಪಲು ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯ

ಸಾಲಿಗ್ರಾಮ ತಾಲ್ಲೂಕಿನ ತಂದ್ರೆಕೊಪ್ಪಲು ಗ್ರಾಮಕ್ಕೆ ಚರಂಡಿ ಮತ್ತು ರಸ್ತೆಗಳನ್ನು ಮಾಡಿಕೊಡಬೇಕೆಂದು ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷ ಟಿ.ಎಸ್ ಮಂಜುನಾಥ್ ಅವರು ಒತ್ತಾಯಿಸಿದ್ದಾರೆ.

ತಂದ್ರೆ ಕೊಪ್ಪಲು ಗ್ರಾಮದಲ್ಲಿ ದಶಕಗಳಿಂದಲೂ ರಸ್ತೆ ಮತ್ತು ಚರಂಡಿಗಳು ಇಲ್ಲದ ಕಾರಣ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಗ್ರಾಮದೊಳಗಡೆ ಬಹುತೇಕ ರಸ್ತೆಗಳು ಇಲ್ಲದಿರುವುದರಿಂದ ಜನ ಜಾನುವಾರುಗಳು ಓಡಾಡಲು ತುಂಬಾ ಅನಾನುಕೂಲವಾಗಿದೆ ಚರಂಡಿಗಳಿಲ್ಲದೇ ರಸ್ತೆ ಮೇಲೆ ಚರಂಡಿ ನೀರು ಹರಿಯುವ ಮೂಲಕ ಊರಿನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಿ ತಂದ್ರೆಕೊಪ್ಪಲು ಗ್ರಾಮಕ್ಕೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

Edited By :
PublicNext

PublicNext

08/10/2022 03:40 pm

Cinque Terre

21.7 K

Cinque Terre

0

ಸಂಬಂಧಿತ ಸುದ್ದಿ