ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಗ್ರಾಮೀಣ ದಸರಾ ಉದ್ಘಾಟಿಸಿದ ಸಚಿವ ಸೋಮಶೇಖರ್‌

ಮೈಸೂರು: ಮೈಸೂರಿನ ಜಯಪುರದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ದಸರಾವನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು, ಶಾಸಕರಾದ ಜಿ.ಟಿ.ದೇವೇಗೌಡ ಅವರೊಂದಿಗೆ ಉದ್ಘಾಟಿಸಿದರು.

ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಸಾಂಸ್ಕೃತಿಕ ಕಲಾತಂಡಗಳ ಜೊತೆಗೆ ಆನೆ, ಕುದುರೆ ಮೆರವಣಿಗೆ, ಕುಂಭಮೇಳ ಸ್ವಾಗತ ಕೋರಲಾಯಿತು. ನಾಡಹಬ್ಬ ದಸರಾ ನಗರಕ್ಕಷ್ಟೇ ಸೀಮಿತವಾಗಬಾರದು ಗ್ರಾಮಗಳಲ್ಲಿ ಕೂಡ ನಡೆಸಲು ಉದ್ದೇಶಿಸಿರುವುದರಿಂದ ಜಯಪುರದಲ್ಲಿ ದಸರಾ ಸಂಭ್ರಮ ಮನೆ ಮಾಡಿತ್ತು.

ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ ಹಲವು ಗಣ್ಯರು ಜೊತೆಯಲ್ಲಿದ್ದರು.

Edited By : Nagaraj Tulugeri
PublicNext

PublicNext

29/09/2022 05:08 pm

Cinque Terre

11.69 K

Cinque Terre

0