ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಡ್ರಗ್ಸ್ ಮೇಲೆ ವಾರ್ ಡಿಕ್ಲೇರ್ ಮಾಡಿದ್ದೇವೆ - ಗೃಹ ಸಚಿವ ಪರಮೇಶ್ವರ್

ಮೈಸೂರು : ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ವಿಚಾರ‌ವಾಗಿ ಮೈಸೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಮಾತನಾಡಿದ್ದು, ಆನೇಕಲ್ ಭಾಗದಲ್ಲಿ ಪೊಲೀಸರು ಹೆಚ್ಚು ರೈಡ್ ಮಾಡುತ್ತಿದ್ದಾರೆ. ಬೇರೆ ರಾಜ್ಯದಿಂದ ರಾಜ್ಯಕ್ಕೆ ಡ್ರಗ್ಸ್ ಬರುತ್ತಿದ್ದನ್ನ ಪೊಲೀಸರು ಹಿಡಿದಿದ್ದಾರೆ. ಮೆಡಿಕಲ್ ಶಾಪ್‌ಗಳ ಮೇಲೆ ಪೊಲೀಸರು ಸರ್ಚ್ ಮಾಡುತ್ತಿದ್ದು, ಡ್ರಗ್ಸ್ ಮೇಲೆ ವಾರ್ ಡಿಕ್ಲೇರ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಬಹಳಷ್ಟು ಜನರ ಮೇಲೆ ಕೇಸ್ ಹಾಕಿದ್ದು, ಹೊರ ದೇಶದಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಹಲವರ ಮೇಲೆ ಪ್ರಕರಣ ಕೂಡ ದಾಖಲಾಗಿದೆ. ಹೊರ ದೇಶದಿಂದ ಬಂದು ಡ್ರಗ್ಸ್ ಮಾರಾಟ ಮಾಡುವವರ ಮಾಹಿತಿಯನ್ನು ಹೈ ಕಮಿಷನ್ ಹಾಗೂ ರಾಯಭಾರಿಗಳಿಗೆ ನೀಡಲಾಗಿದೆ. ಡ್ರಗ್ಸ್ ಮೇಲೆ ರಿಲ್ಯಾಕ್ಸ್ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Edited By : Manjunath H D
PublicNext

PublicNext

19/11/2024 08:51 am

Cinque Terre

34.38 K

Cinque Terre

0

ಸಂಬಂಧಿತ ಸುದ್ದಿ