ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ರೈತರ ವಿಧಾನಸೌಧ ಚಲೋಗೆ ಟಿ.ನರಸೀಪುರದಲ್ಲಿ ವ್ಯಾಪಕ ಬೆಂಬಲ

ಟಿ.ನರಸೀಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘಟನೆಗಳು ಕರೆ ನೀಡಿರುವ ವಿಧಾನಸೌಧ ಚಲೋಗೆ ಟಿ.ನರಸೀಪುರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಟಿ.ನರಸೀಪುರದಿಂದ ನೂರಾರು ಸಂಖ್ಯೆಯಲ್ಲಿ ಅನ್ನದಾತರು ವಿಧಾನಸೌಧ ಚಲೋ ಬೆಂಬಲಿಸಿ ಬಸ್ಸು, ಟ್ರೈನ್ ಮೂಲಕ ಬೆಂಗಳೂರಿನತ್ತ ತೆರಳಿದ್ದಾರೆ.

ವಿದ್ಯುತ್ ಖಾಸಗಿಕರಣ, ಕೃಷಿ ಪಂಪ್ ಸೆಟ್ ಮೇಲಿನ ದರ ಏರಿಕೆ ಹಾಗೂ ಕಬ್ಬಿನ ದರ ಏರಿಕೆ ಪ್ರಮುಖ ಬೇಡಿಕೆಗಳಾಗಿದ್ದು, ಈಡೇರಿಸುವಂತೆ

ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಬಳಿಕ ವಿಧಾನಸೌಧ ಚಲೋ ಹಮ್ಮಿಕೊಂಡಿರುವುದಾಗಿ ಪ್ರತಿಭಟನೆಗೆ ಸಾವಿರಾರು ರೈತ ಮುಖಂಡ ಕಿರಗಸೂರು ಶಂಕರ್ ಹೇಳಿಕೆ ನೀಡಿದ್ದಾರೆ.

Edited By : Shivu K
PublicNext

PublicNext

26/09/2022 04:04 pm

Cinque Terre

20.63 K

Cinque Terre

0