ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ನಾಡಹಬ್ಬ ದಸರಾ ಸಂಭ್ರಮ: ಅರಮನೆ ಆವರಣದಲ್ಲಿ ರಂಗೋಲಿ ಸ್ಪರ್ಧೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಮೈಸೂರಿನಲ್ಲಿ 2ನೇ ದಿನದ ದಸರಾ ಸಂಭ್ರಮ ರಂಗೇರಿದೆ. ಅರಮನೆ ಆವರಣದ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಮಕ್ಕಳು ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್, ದಸರಾ ಎಂದು ರಂಗೋಲಿಯಲ್ಲಿ ಬರೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದ್ರು. ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾಗಿರುವ 50ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಈ ಬಾರಿ ಯೋಗ ಚಿತ್ರ, ಜಂಬೂಸವಾರಿ, ಭಾರತ ಮಾತೆ ಚಿತ್ರ, ದುರ್ಗಾ ದೇವಿ, ನಂದೀಶ್ವರ, ಮಹಿಷಾಸುರ ಚಿತ್ರ, ಆನೆ ಅಂಬಾರಿ , ಇನ್ನೂ ಮುಂತಾದ ಚಿತ್ರಗಳನ್ನು ವರ್ಣರಂಜಿತವಾಗಿ ರಂಗೋಲಿ ಬಿಡಿಸುವ ಮೂಲಕ ಪ್ರತಿಭೆಯನ್ನು ತೋರ್ಪಡಿಸಿದ್ರು..

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ವೈಜ್ಞಾನಿಕವಾಗಿ ರಂಗೋಲಿ ಹಾಕುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಇದರಿಂದ 8 ಆಸನಗಳ ವ್ಯಾಯಾಮ ಸಿಗಲಿದೆ. ಕಣ್ಣು, ಬುದ್ಧಿ ಚುರುಕಾಗುತ್ತೆ ಎಂದರು. ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು ಕೂಡಾ ತಮ್ಮ ಅಭಿಪ್ರಾಯ ಹಂಚಿಕೊಂಡರು.

Edited By : Somashekar
PublicNext

PublicNext

28/09/2022 01:47 pm

Cinque Terre

19.81 K

Cinque Terre

0