ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ದಸರಾ ಮಹೋತ್ಸವ : ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕೊಡಗು ಜಿಲ್ಲೆ ಪ್ರಥಮ

ಮೈಸೂರು: ವಿಶ್ವವಿಖ್ಯಾತ ದಸರಾ ಮೆರವಣಿಗೆಯ ಆಕರ್ಷಣೆಯಾಗಿದ್ದ ಸ್ತಬ್ದಚಿತ್ರಗಳಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.ಮೈಸೂರು ಜಿಲ್ಲೆಗೆ ದ್ವಿತೀಯ ಸ್ಥಾನ, ಚಿತ್ರದುರ್ಗ ಜಿಲ್ಲೆಯ ಟ್ಯಾಬ್ಲೋಗೆ ತೃತೀಯ ಸ್ಥಾನ ಸಿಕ್ಕಿದೆ.

ಕೊಡಗು ಜಿಲ್ಲೆಯ ಸ್ತಬ್ಧಚಿತ್ರದಲ್ಲಿ ಜೀವನದಿ ಕಾವೇರಿಯ ವಿಶೇಷತೆ ಇತ್ತು. ಬ್ರಹ್ಮಗಿರಿ ಬೆಟ್ಟ, ಭಗಂಡೇಶ್ವರ ದೇವಸ್ಥಾನ, ಕಾವೇರಿ ಕುಂಡಿಕೆ, ಕೊಡಗಿನ ಜಲಪಾತಗಳು, ಕೊಡಗಿನ ಕಾಫಿ, ಕಿತ್ತಳೆ, ಏಲಕ್ಕಿ, ಕರಿಮೆಣಸು ಬೆಳೆ, ಡಿಜಿಟಲ್ ತಂತ್ರಜ್ಞಾನ ಸ್ತಬ್ಧ ಚಿತ್ರದಲ್ಲಿ ಮೇಳೈಸಿತ್ತು.

ಮೈಸೂರು ಸ್ತಬದ್ಧ ಚಿತ್ರದಲ್ಲಿ ಮೈಸೂರು ಪೇಟ, ಮೈಸೂರು ಪಾಕ್, ನಂಜನಗೂಡು ರಸಬಾಳೆ, ಮೈಸೂರು ದಸರಾ, ಮೈಸೂರು ಮಲ್ಲಿಗೆ, ಮಹಿಷಾಸುರ, ಬೆಟ್ಟದ ನಂದಿ, ಚಾಮುಂಡೇಶ್ವರಿ ಕಲಾಕೃತಿಗಳಿದ್ದವು. ಚಿತ್ರದುರ್ಗ ಜಿಲ್ಲೆಯ ಸ್ತಬ್ಧಚಿತ್ರದಲ್ಲಿ ವಾಣಿವಿಲಾಸ ಜಲಾಶಯ, ರಾಜ ವೀರ ಮದಕರಿನಾಯಕ, ವೀರವನಿತೆ ಒನಕೆ ಓಬವ್ವ ಕಲಾಕೃತಿಯಿತ್ತು. ಇಲಾಖೆಗಳ ವಿಭಾಗದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಪ್ರಥಮ ಸ್ಥಾನ, ಕೆಎಂಎಫ್ ಟ್ಯಾಬ್ಲೋ ಎರಡನೇ ಸ್ಥಾನ ಪಡೆದಿದೆ. ಡಾ.ಬಾಬು ಜನಜೀವನರಾಮ್ ಅಭಿವೃದ್ಧಿ ನಿಗಮದ ಲಿಡ್ಕರ್ ಉತ್ಪನ್ನದ ಸ್ತಬ್ಧ ಚಿತ್ರಕ್ಕೆ 3ನೇ ಸ್ಥಾನ ಸಿಕ್ಕಿದೆ.

Edited By : Manjunath H D
PublicNext

PublicNext

07/10/2022 03:48 pm

Cinque Terre

24.75 K

Cinque Terre

0