ಮೈಸೂರು: ದಸರಾ ಜಂಬೂ ಸವಾರಿಗೂ ಮುನ್ನ ಅರಮನೆಯಲ್ಲಿ ನೆಡೆಯುವ ಸಂಪ್ರದಾಯಕ ವಜ್ರಮುಷ್ಠಿ ಕಾಳಗಕ್ಕೆ ಅರಮನೆಯಲ್ಲಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ.
ಈಗಾಗಲೇ ಅರಮನೆ ಸಿಬ್ಬಂದಿಗಳು ಕೆಮ್ಮಣ್ಣು ತಂದು ಮಟ್ಟಿ ಸಿದ್ದಪಡಿಸಿದ್ದು ಉಸ್ತಾದ್ ಮಂಜು ಜೆಟ್ಟಿ ಅವರ ಸಮ್ಮುಖದಲ್ಲಿ ಜಟ್ಟಿಗಳ ಜೊತೆ ಕಟ್ಟುವ ಕಾರ್ಯ ಪೂರ್ಣವಾಗಿದೆ ಈ ಬಾರಿ ನಾಲ್ಕು ಜಿಲ್ಲೆಗಳಿಂದ ತಲಾ ಒಬ್ಬರು ಜೆಟ್ಟಿಗಳು ಕಾಳಗದಲ್ಲಿ ಭಾಗಿಯಾಗಲಿದ್ದು ಮೈಸೂರಿನ ವಿಷ್ಣು ಜೆಟ್ಟಿ, ಬೆಂಗಳೂರಿನ ತಾರಾನಾಥ್ ಜೆಟ್ಟಿ, ಚೆನ್ನಪಟ್ಟಣದ ಮನೋಜ್ ಜೆಟ್ಟಿ ಹಾಗೂ ಚಾಮರಾಜನಗರ ಜಿಲ್ಲೆಯ ಅಚ್ಯುತ್ ಜೆಟ್ಟಿ ಕಾಳಗದಲ್ಲಿ ಭಾಗವಹಿಸಲಿದ್ದಾರೆ.
ರಾಜರ ಕಾಲದಲ್ಲಿ ಅತ್ಯಂತ ವೈಭವದಿಂದ ನಡೆಯುತ್ತಿದ್ದ ಈ ಜಟ್ಟಿ ಕಾಳಗದಲ್ಲಿ ಜೆಟ್ಟಿಗಳು ರಕ್ತ ಸುರಿಸಿ ನಾಡಿಗೆ ಶ್ರೇಯಸ್ಸು ಬಯಸುತ್ತಿದ್ದದ್ದು ವಾಡಿಕೆ.
PublicNext
05/10/2022 04:06 pm