ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಸ್ಯಾಂಡಲ್ ವುಡ್ ನೈಟ್ಸ್ ಭಿತ್ತಿಪತ್ರ ವಿತರಣೆ

ಮೈಸೂರು: ನಾಡ ಹಬ್ಬ ದಸರಾದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ಯುವ ದಸರಾದ ಸೆ.30.ರ ಸ್ಯಾಂಡಲ್ ವುಡ್ ನೈಟ್ಸ್ ವಿಶೇಷ ಕಾರ್ಯಕ್ರಮದ ಭಿತ್ತಿಪತ್ರವನ್ನು ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿಯಾಗಿರುವ ಎಸ್ಪಿ ಆರ್.ಚೇತನ್ ಅವರು ಬಿಡುಗಡೆಗೊಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ಯಾಂಡಲ್ ವುಡ್ ನೈಟ್ಸ್ ವಿಶೇಷ ಆಹ್ವಾನಿತರಾಗಿ ನಟರಾದ ಉಪೇಂದ್ರ, ಅಭಿಷೇಕ್ ಅಂಬರೀಶ್,ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರಜ್ವಲ್ ದೇವರಾಜ್, ಚಿಕ್ಕಣ್ಣ,ಧನ್ವೀರ್ ಗೌಡ,ನಟಿ ಸಪ್ತಮಿ ಗೌಡ ಆಗಮಿಸಲಿದ್ದಾರೆ ಎಂದರು.

ಸಂಗೀತ ಕಾರ್ಯಕ್ರಮವನ್ನು ಸಾಧು ಕೋಕಿಲ ಅವರು ನಡೆಸಲಿದ್ದು, ನಟ ದೀರನ್ ರಾಮ್, ನಟಿಯರಾದ ನಿಧಿ ಸುಬ್ಬಯ್ಯ,ಕೃಷಿ ತಪಂಡ,ಸೋನುಗೌಡ,ಹರ್ಷಿಕ ಪೂಣಚ್ವ ಅವರು ವಿಶೇಷ ಪ್ರದರ್ಶನ ನೀಡಲಿದ್ದಾರೆ.

ನಟಿಯರಾದ ನಿಶ್ವಿಕ,ಮಿಲನ ನಾಗರಾಜ್,ಅಮೃತ ಅಯ್ಯಂಗಾರ್, ಮಾನ್ವಿತ ಹರೀಶ್, ಕಾರುಣ್ಯ ರಾಮ್, ನಟ ಡಾರ್ಲಿಂಗ್ ಕೃಷ್ಣ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಅಲೋಕ್ ಬಾಬು ಅವರಿಂದ ಸಂಗೀತ ಕಚೇರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

Edited By : Abhishek Kamoji
Kshetra Samachara

Kshetra Samachara

29/09/2022 05:43 pm

Cinque Terre

1.24 K

Cinque Terre

0