ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಬೆಳ್ಳಾರೆಯಲ್ಲಿ ಗೃಹರಕ್ಷಕ ದಳದ ಕಟ್ಟಡ ನಿರ್ಮಿಸಲು ಸಚಿವರಿಗೆ ಮನವಿ

ಪುತ್ತೂರು:ಗೃಹರಕ್ಷಕ ದಳ ಬೆಳ್ಳಾರೆ ಯುನಿಟ್ ವತಿಯಿಂದ ಬೆಳ್ಳಾರೆ ಪರಿಸರದಲ್ಲಿ ವನಮಹೋತ್ಸವ ಆಚರಿಸಲಾಯಿತು. ಸಂಸ್ಥೆಯ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀಮೋಹನ್ ಚೂಂತಾರು, ಯುನಿಟ್ ಅಧಿಕಾರಿ ವಸಂತ, ಗೃಹರಕ್ಷಕ ಸಿಬ್ಬಂದಿಗಳಾದ ಹೂವಪ್ಪ, ದಿವಾಕರ, ಅಶ್ವಿನಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೆಳ್ಳಾರೆಯಲ್ಲಿ ಗೃಹರಕ್ಷಕ ದಳದ ಕಟ್ಟಡ ನಿರ್ಮಿಸಲು 10ಸೆಂಟ್ಸ್ ಜಾಗ ನೀಡಬೇಕೆಂದು ಸಚಿವ ಎಸ್. ಅಂಗಾರರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿ.ಜೆ.ಪಿ. ನಾಯಕರುಗಳಾದ ಆರ್.ಕೆ. ಭಟ್ ಕುರುಂಬುಡೇಲು, ನಾ ಸೀತಾರಾಮ, ಚಂದ್ರಾ ಕೋಲ್ಚಾರು, ಶ್ರೀನಾಥ್ ರೈ, ಪದ್ಮನಾಭ ಪೆರುವಾಜೆ ಮತ್ತಿತರರು ಜೊತೆಗಿದ್ದರು.

Edited By : PublicNext Desk
Kshetra Samachara

Kshetra Samachara

13/06/2022 06:20 pm

Cinque Terre

1.2 K

Cinque Terre

0