ಮಂಗಳೂರು: ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ಸುದ್ದಿಯ ಹೆಡ್ಡಿಂಗ್‌ನ್ನು ತುಳು ಭಾಷೆಯಲ್ಲಿ ಬರೆಯುವ ಮೂಲಕ ವಿಶ್ವ ತುಳುವರ ಗಮನ ಸೆಳೆದಿದೆ.
ಶಾರ್ಜಾದಲ್ಲಿ ರವಿವಾರ ರಾತ್ರಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಪಂಜಾಬ್‌ನ ಆಟಗಾರ ನಿಕೋಲಸ್ ಪೂರನ್ ಅವರ ಫೀಲ್ಡಿಂಗ್ ಉಲ್ಲೇಖಿಸಿ ಮಾಡಿದ್ದ ಸುದ್ದಿಗೆ ‘‘ ಶೇ...ಎಂಚಿನ ಫೀಲ್ಡಿಂಗ್ ಮಾರ್ರೆ..!’ ( ಶೇ.. ಎಂತಹ ಫೀಲ್ಡಿಂಗ್ ಮಾರಾಯರೆ..!) ಎಂದು ಹೆಡ್ಡಿಂಗ್ ನೀಡುವ ಮೂಲಕ ತುಳುವರ ಮನ ಗೆದ್ದಿದೆ.
ಸುದ್ದಿಯನ್ನು ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್, ತನ್ನ ಟ್ವಿಟರ್‌ನಲ್ಲಿ ಸುದ್ದಿಗೆ ತುಳು ಭಾಷಾ ಸೊಗಡಿನಲ್ಲಿಯೇ ಹೆಡ್ಡಿಂಗ್ ನೀಡಿದ್ದು, ತುಳುವರ ಪ್ರಶಂಸೆ, ಅಭಿಮಾನಕ್ಕೆ ಪಾತ್ರವಾಗಿದೆ.
Kshetra Samachara
29/09/2020 12:05 am