ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಎ.16:ಬಂಟ್ಸ್ ಪ್ರೀಮಿಯರ್ ಲೀಗ್ 2022

ಮುಲ್ಕಿ: ಬಂಟರ ಸಂಘ ಮೂಲ್ಕಿ ಇದರ ಯುವ ವಿಭಾಗದ ವತಿಯಿಂದ ಎಪ್ರೀಲ್ 16 ರಂದು ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೀರ್ತಿ ಶೇಷ ಅಮರನಾಥ ಶೆಟ್ಟಿ ಹೆಸರಿನಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ 2022 ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕ ಉಮಾನಾಥ ಕೋಟ್ಯಾನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೂಲ್ಕಿ ಮೂಡಬಿದ್ರೆ ಕಾಂಗ್ರೇಸ್ ಚುನಾವಣಾ ಉಸ್ತುವಾರಿ ಮಿಥುನ್ ರೈ, ಚಾವಡಿಮನೆ ಜಗನ್ನಾಥ ಶೆಟ್ಡಿ, ಮುನಿಯಾಲು ಉದಯಕುಮಾರ್ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಮೂಲ್ಕಿ ಹೋಬಳಿಯ ಒಟ್ಟು 32 ಗ್ರಾಮಗಳ ಒಟ್ಟು 12 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಬಂಟರ ಸಂಘದ ಅಧ್ಯಕ್ಷ ಪುರುಶೋತ್ತಮ ಶೆಟ್ಟಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

16/04/2022 07:27 am

Cinque Terre

2.22 K

Cinque Terre

0

ಸಂಬಂಧಿತ ಸುದ್ದಿ