ಮುಲ್ಕಿ : ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ತೋಕೂರು ಯುವಕ ಸಂಘ ಹಾಗೂ ಮಹಿಳಾ ಮಂಡಲ (ರಿ) ಸಹಭಾಗಿತ್ವದಲ್ಲಿ ತೆಂಗು ಬೆಳೆಯ ಆಧುನಿಕ ಬೇಸಾಯ ಪದ್ಧತಿಗಳ ತರಬೇತಿ ಕಾರ್ಯಕ್ರಮ ತೋಕೂರು ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಯುವಕ ಮಂಡಲದ ಅದ್ಯಕ್ಷ ವಿನೋದ ಸುವರ್ಣ ರವರು ವಹಿಸಿದ್ದರು
ಕೃಷಿ ವಿಜ್ಞಾನಿಯಾದ ಡಾ. ಕೇದಾರನಾಥ ಹಾಗೂ ಡಾ. ಮಲ್ಲಿಕಾರ್ಜುನ ರವರು ತೆಂಗು ಕೃಷಿ ಅಭಿವೃದ್ಧಿ ಮತ್ತು ಮಣ್ಣು ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಅದ್ಯಕ್ಷೆ ಅನುಪಮ ರಾವ್ ಒಕ್ಕೂಟದ ಅದ್ಯಕ್ಷರಾದ ಲತಾ, ಯೋಜನೆಯ ಮೇಲ್ವಿಚಾರಕ ಚಂದ್ರಶೇಖರ್ ನಾಯಕ್, ಸೇವಾಪ್ರತಿನಿದಿ ಸವಿತಾ ಶರತ್ ಬೆಳ್ಳಾಯರು, ಹೇಮನಾಥ್ ತೋಕೂರು, ಪ್ರೋಗ್ರಾಂ ಮೆನೇಜರ್ ಜೀವನ್, ಯೋಜನೆಯ ಸದಸ್ಯರು , ಯುವಕ ಹಾಗೂ ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಸಹನ ಎಸ್ ಸುವರ್ಣ ರವರು ಮೆಷಿನ್ ಮೂಲಕ ತೆಂಗಿನ ಮರ ಏರುವ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
Kshetra Samachara
28/01/2022 01:42 pm