ಬಜಪೆ: ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ. 13ರಿಂದ 15ರವರೆಗೆ ಕಾಲಾವಧಿ ಬಂಡಿ ಜಾತ್ರೆ ಜರುಗಲಿದೆ.
ಫೆ. 13ರಂದು ಪ್ರಾತಃಕಾಲ 5 ಗಂಟೆಗೆ ಭಂಡಾರ ಹೊರಡಲಿದ್ದು, 8 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಬೆಳಿಗ್ಗೆ 11ರಿಂದ 1ರವರೆಗೆ ಕಂಚಿಲು ಸೇವೆ ಮತ್ತು ಉರುಳು ಸೇವೆ, ಮಧ್ಯಾಹ್ನ 1ರಿಂದ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ಬಂಡಿ ಜಾತ್ರೆ ಪ್ರಯುಕ್ತ 'ಸಾರ್ವಜನಿಕ ಮಹಾ ಅನ್ನಸಂತರ್ಪಣೆ' ನಡೆಯಲಿದೆ. ರಾತ್ರಿ 8ಕ್ಕೆ ಶ್ರೀ ಮೈಸಂದಾಯ ದೈವದ ನೇಮ, ರಾತ್ರಿ 10ರಿಂದ ಶ್ರೀ ಮುಂಡಿತ್ತಾಯ ದೈವದ ನೇಮ, ಮುಂಜಾನೆ ಬಂಡಿ ರಥೋತ್ಸವ, ಪ್ರಸಾದ ವಿತರಣೆಯಾಗಲಿದೆ.
ಫೆ. 14ರಂದು ರಾತ್ರಿ 8ರಿಂದ ಶ್ರೀ ಧೂಮಾವತಿ, ಬಂಟ ಮತ್ತು ಪರಿವಾರ ದೈವಗಳ ನೇಮ. ಬಳಿಕ ಅಭಯ ಪ್ರದಾನ, ಪ್ರಸಾದ ವಿತರಣೆ. ಫೆ. 15ರಂದು ಸಂಜೆ 7ಕ್ಕೆ ತುಡಾರ ಬಲಿ ಹಾಗೂ ಧ್ವಜಾವರೋಹಣದೊಂದಿಗೆ ಭಂಡಾರ ನಿರ್ಗಮಿಸಲಿದೆ.
Kshetra Samachara
09/02/2022 09:26 pm