ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಂಚಮ ಪುಣ್ಯತಿಥಿ ಆಚರಣೆ

ಮಂಗಳೂರು: ಮಹಾಪ್ರಸ್ಥಾನಗೈದು ವೃಂದಾವನಸ್ಥರಾದ ಕಾಶೀ ಮಠ ಸಂಸ್ಥಾನದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಐದನೇ ಪುಣ್ಯತಿಥಿಯ ಆರಾಧನೆಯು ಈ ಬಾರಿ ಮಂಗಳೂರಿನ ಶ್ರೀ ವೆಂಕಟರಮಣ ದೇವಳದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನೆರವೇರಿತು.

ರಾತ್ರಿ ದೇವಳದಲ್ಲಿ ವಿಶೇಷ ಸ್ವರ್ಣ ಗರುಡೋತ್ಸವ, ಸಂಸ್ಥಾನದಲ್ಲಿ ಪ್ರಧಾನ ಶ್ರೀ ವೇದವ್ಯಾಸ ದೇವರಿಗೆ ಕನಕಾಭಿಷೇಕ, ಗಂಗಾಭಿಷೇಕ, ಲಘು ವಿಷ್ಣು ಅಭಿಷೇಕಗಳು ನಡೆಯಿತು. ರಾತ್ರಿ ಸಂಸ್ಥಾನದ ಶ್ರೀ ವೇದವ್ಯಾಸ ದೇವರಿಗೆ  ಸ್ವರ್ಣ ಗರುಡ ವಾಹನ ಸೇವೆ ಶ್ರೀಗಳಿಂದ ನಡೆಯಿತು.

ಈ ಸಂದರ್ಭ ದೇವಳದ ಮೊಕ್ತೇಸರ ಸಿ.ಎಲ್.ಶೆಣೈ, ಕೆ.ಪಿ. ಪ್ರಶಾಂತ್ ರಾವ್, ರಾಮಚಂದ್ರ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

21/01/2021 10:32 pm

Cinque Terre

16.46 K

Cinque Terre

0

ಸಂಬಂಧಿತ ಸುದ್ದಿ