ಮಂಗಳೂರು: ನಗರದ ಹೊರವಲಯದ ಅಡ್ಯಾರ್ ,ಅರ್ಕುಳ, ಮಲ್ಲೂರು, ಬೊಂಡಂತಿಲ, ಉಳಾಯಿಬೆಟ್ಟು, ನೀರುಮಾರ್ಗ ಗ್ರಾಮ ಪಂಚಾಯತ್ ಗಳಿಗೆ ಸರಕಾರದ ಜಲಜೀವನ್ ಮಿಷನ್ ವತಿಯಿಂದ ಬಹುಗ್ರಾಮ ಶುದ್ದ ಕುಡಿಯುವ ನೀರಿನ ಯೋಜನೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಜಲಜೀವನ ಮಿಷನ್ ಯೋಜನೆಯಡಿ 6 ಗ್ರಾಮಗಳಿಗೆ ಪೈಪ್ ಲೈನ್ ಹಾಕುವ ಯೋಜನೆ, ಸಮೀಪದಲ್ಲಿ ಬೋರ್ ವೆಲ್ ತೋಡುವ ಮೂಲಕ ನೀರಿನ ಸಂಪರ್ಕ ನೀಡಲಾಗುವುದು. ನೀರಿನ ಮೂಲ ನಿರಂತರವಾಗಿ ಇರುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಒಟ್ಟು 140 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ಉತ್ತರ, ಮೂಡಬಿದ್ರೆ, ಬಂಟ್ವಾಳ, ಮಂಗಳೂರು, ಕ್ಷೇತ್ರ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡುವ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 41 ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಇದಾಗಿದೆ. ಪಂಚಾಯತ್ ನೀರಿನ ಸಂಪರ್ಕ ನೀಡುವ ಜವಾಬ್ದಾರಿ ಹೊಂದಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಹರೀಕೇಷ್ ಶೆಟ್ಟಿ, ಮನಪಾ ಸದಸ್ಯರಾದ ಹೇಮಲತಾ ರಘುಸಾಲ್ಯಾನ್,ರತ್ನಾ ಸುರೇಶ್, ಉಳಾಯಿಬೆಟ್ಟು ಪಿಡಿಒ ಅನಿತಾ ವಿ.ಕ್ಯಾತರಿನ್, ಪಿಡಿಒ ರಾಜೇಂದ್ರ, ನರೇಂದ್ರ ಬಾಬು, ನೀರು ಸರಬರಾಜಿನ ಎಂಜಿನಿಯರ್, ಜಿ ಕೆ ನಾಯಕ್ ,ನರೇಂದ್ರ ಜಗದೀಶ್ ಎಂಜಿನಿಯರ್ ಸುಧಾಕರ ಶೆಟ್ಟಿ, ಕಿಶೋರ್, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
03/10/2022 12:03 pm