ಸುರತ್ಕಲ್: ಇಲ್ಲಿನ ಬ್ರಹತ್ ಉದ್ದಿಮೆಯಾದ ಎಂ,ಅರ್,ಪಿ,ಎಲ್ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ಅಧಾರದ ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಎಂ,ಅರ್,ಪಿ,ಎಲ್ ಕರ್ಮಚಾರಿ ಸಂಘದ ವತಿಯಿಂದ ಕರ್ನಾಟಕ ಸರಕಾರದ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ ಬೆಂಗಳೂರು ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು ಮನವಿಗೆ ಸ್ಪಂದಿಸಿದ ಸಚಿವರು ತಕ್ಷಣ ಎಂ,ಅರ್,ಪಿ,ಎಲ್ ಸಂಸ್ಥೆಗೆ ಮತ್ತು ಕಾರ್ಮಿಕ ಇಲಾಖೆಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕರ್ಮಚಾರಿ ಸಂಘದ ವಿಭಾಗ ಪ್ರತಿನಿಧಿ ಪುಷ್ಪರಾಜ್ ಶೆಟ್ಟಿ ಮಧ್ಯ ಬಿಜೆಪಿ ಮುಖಂಡರಾದ ದಿವಾಕರ ಸಾಮಾನಿ ಚೇಳೈರು, ಸುರೇಶ್ ಶೆಟ್ಟಿ ಪುಚ್ಚಾಡಿ ಸೂರಿಂಜೆ ದೇವಿಚರಣ್ ಶೆಟ್ಟಿ ಚೇಳೈರು ಉಪಸ್ಥಿತರಿದ್ದರು
Kshetra Samachara
22/09/2022 08:06 am