ಮುಲ್ಕಿ: ನಮ್ಮ ದೇಶದ ಸಂವಿಧಾನದಲ್ಲಿ ಸರ್ವ ಜನರ ಸಹಭಾಳ್ವೆಗಾಗಿ ಬೇಕಾದ ಎಲ್ಲಾ ಹಕ್ಕುಗಳನ್ನು ನೀಡಲಾಗಿದೆ, ಆ ಹಕ್ಕುಗಳನ್ನು ಪ್ರಜೆಗಳಿಗೆ ಲಭಿಸುವಂತೆ ಮಾಡುವುದು ಸರ್ಕಾರದ ಅದ್ಯ ಕರ್ತವ್ಯ ಎಂದು ಫಾ.ಪ್ರಾನ್ಸಿಸ್ ಆಸ್ಸಿಸಿ ಆಲ್ಮೇಡಾ ಹೇಳಿದರು.
ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ಕಿನ್ನಿಗೋಳಿ ಕಥೊಲಿಕ್ ಸಭಾ ಹಾಗೂ ಶ್ರೀಸಾಮಾನ್ಯರ ಆಯೋಗ ದ ಆಶ್ರಯದಲ್ಲಿ ಜರಗಿದ ಸಂವಿಧಾನದ ಪರಿಚ್ಚೇದಗಳ ಪರಿಚಯ ಮತ್ತು ಅಲ್ಪ ಸಂಖ್ಯಾತರ ಹಕ್ಕುಗಳ ಬಗ್ಗೆ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಪಾವೊಸ್ತಿನ್ ಲೋಬೋ, ಸಹಾಯಕ ಧರ್ಮಗುರು ಫಾ.ವಿಒವೇಕ್ ಪಿಂಟೊ, ಫಾ.ಲಾನ್ಸಿ ಸಲ್ದಾನಾ, ಚರ್ಚ್ ಪಾಲಾನ ಮಂಡಳಿಯ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ, ಕಾರ್ಯದರ್ಶಿ ವಿನ್ಸ್ಂಟ್ ಮಥಾಯಸ್,21 ಆಯೋಗದ ಸಂಯೋಜಕ ಜೋಸೆಫ್ ಕ್ವಾಡ್ರಸ್, ಕಥೊಲಿಕ್ ಸಭಾ ಉಪಾಧ್ಯಕ್ಷ ವಿಲಿಯಂ ಸಿಕ್ವೇರಾ, ಕೋಶಾದಿಕಾರಿ ನವೀನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.ಕಥೊಲಿಕ್ ಸಭೆಯ ಅಧ್ಯಕ್ಷ ಪ್ರಕಾಶ್ ಡಿಸೋಜ ಸ್ವಾಗತಿಸಿದರು. ಗ್ರೇಟ್ಟಾ ಫೆರ್ನಾಂಡಿಸ್ ವಂದಿಸಿದರು. ಸಂಗೀತಾ ಸೆರಾವೂ ಕಾರ್ಯಕ್ರಮ ನಿರೂಪಿಸಿದರು.
Kshetra Samachara
20/09/2022 10:15 am