ಸುರತ್ಕಲ್:ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಮಾರ್ಗದರ್ಶನದಂತೆ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳದ ತಂಡವು ಸುರತ್ಕಲ್ ಪೊಲೀಸ್ ಠಾಣೆಯ ಬೆಂಬಲದೊಂದಿಗೆ ಎನ್ ಐ ಟಿ ಕೆ ಪರಿಸರದಲ್ಲಿನ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಪರಿಶೀಲಿಸಿ ತಂಬಾಕು ಪದಾರ್ಥಗಳನ್ನು ಸೆಕ್ಷನ್ ಸಿಕ್ಸ್ ಬಿ ಉಲ್ಲಂಘಿಸಿ ಮಾರಾಟ ಮಾಡುವವರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಯೂ ಸಹ ಸೆಕ್ಷನ್ 4 ಉಲ್ಲಂಘಿಸಿದವರಿಗೆ ಕಾಯ್ದೆ ಬಗ್ಗೆ ವಿವರಿಸಿ ಕಾನೂನಿನ ಚೌಕಟ್ಟಿನಲ್ಲಿ ವ್ಯಾಪಾರ ಮಾಡಬಹುದು ಎಂಬುದರ ಬಗ್ಗೆ ಅರಿವು ಮೂಡಿಸಿದರು.
ಅಂಗಡಿ ಮುಂದೆ ಕಡ್ಡಾಯವಾಗಿ ಧೂಮಪಾನ ನಿಷೇಧಿಸಿದೆ ಎಂಬ ನಿಗದಿತ ನಾಮಫಲಕ ಪ್ರದರ್ಶಿಸುವಂತೆ ತಿಳಿಸಲಾಯಿತು
ಕಾರ್ಯಾಚರಣೆಯಲ್ಲಿ ಸೆಕ್ಷನ್ ನಾಲ್ಕರ ಅಡಿ 46 ಪ್ರಕರಣ ಸೆಕ್ಷನ್ ಸಿಕ್ಸ್ ಬಿಯಡಿ ಏಳು ಪ್ರಕರಣ ದಾಖಲಿಸಿ ಒಟ್ಟು ರೂಪಾಯಿ 6,500 ದಂಡವನ್ನು ಸ್ಥಳದಲ್ಲಿಯೇ ವಿಧಿಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಾಮಾಜಿಕ ಕಾರ್ಯಕರ್ತೆ ಶ್ರುತಿ, ಆಪ್ತ ಸಮಾಲೋಚಕ ವಿಜಯ್, ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಪ್ರದೀಪ್, ವಿದ್ಯಾ ಹಾಗೂ ಪೊಲೀಸ್ ಸಿಬ್ಬಂದಿ ಮಣಿಕಂಠ ಉಪಸ್ಥಿತರಿದ್ದರು.
Kshetra Samachara
27/08/2022 06:01 am