ಮಂಗಳೂರು: ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಶ್ರೀ ಡಾ ಮಂಜುನಾಥ ರೇವಣಕರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸುಬ್ರಾಯ ಭಟ್ ರವರು ಕೇರಳದ ಕಾಸರಗೋಡು ಜಿಲ್ಲೆಯ ಹೊಸಂಗಡಿಯಲ್ಲಿ ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡಿಗರ ಸಮಸ್ಯೆ ಮತ್ತು ತೊಂದರೆಗಳ ಬಗ್ಗೆ ಗಹನವಾದ ಚರ್ಚೆ ನಡೆಸಿ ಕನ್ನಡ ಉಳಿಸಿ ಬೆಳೆಸಿ ಎಂದು ಕಿವಿ ಮಾತು ಹೇಳಿದರು
ರೋಗಿಗಳ ಜೊತೆ ಗಡಿನಾಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದರು. ಅದೇ ರೀತಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕನ್ನಡ ವೈದ್ಯಕೀಯ ಸಾಹಿತ್ಯದ ಸೇವೆ ಮತ್ತು ತಾಯಿ ಭುವನೇಶ್ವರಿಯ ಸೇವೆ ಮಾಡುತ್ತಿರುವ ಡಾ ಮುರಲಿ ಮೋಹನ್ ಚೂಂತಾರು ರವರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ದಂತ ವೈದ್ಯೆ ಡಾ ರಾಜಶ್ರೀ ಮೋಹನ್,ಡಾ ನಿಶ್ಮ,ಸಹಾಯಕಿಯರಾದ ರಮ್ಯಾ, ಚೈತ್ರ ಮತ್ತು ಸುಷ್ಮಿತಾ ಉಪಸ್ಥಿತರಿದ್ದರು.
Kshetra Samachara
22/08/2022 03:04 pm