ಮುಲ್ಕಿ:ಸರಕಾರ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದು, ಸರಕಾರದ ಅನೇಕ ಯೋಜನೆ ಯೋಚನೆಗಳು ಕೃಷಿಕರಿಗೆ ತಲುಪುವಂತಾಗಬೇಕು ಎಂದು ಎಸ್.ಬಿ.ಐ ನ ರೀಜಿನಲ್ ಮ್ಯಾನೇಜರ್ ಉದಯ ಕುಮಾರ್ ಹೇಳಿದರು.
ಅವರು ಕಿನ್ನಿಗೋಳಿ ರೋಟರಿಭವನದಲ್ಲಿ ನಡೆದ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮತ್ತು ರೋಟರಿಕ್ಲಬ್ ಸಹಕಾರದಲ್ಲಿ ರೈತರ ರಾತ್ರಿ ಶಿಬಿರದಲ್ಲಿ ಮಾತನಾಡಿದರು.
ಈ ಸಂದರ್ಭ ಕೃಷಿ ಮತ್ತು ನೇಕಾರಿಕೆಯಲ್ಲಿ ಸಾಧನೆ ಮಾಡಿದ ಕರುಣಾಕರ ಅಳ್ವ, ಮೋಹಿನಿ ಶೆಟ್ಟಿಗಾರ್, ವಿಜಯ ರವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ರೈತರಿಗೆ ವಿವಿಧ ಮಾಹಿತಿ ನೀಡಲಾಯಿತು. ಈ ಸಂದರ್ಭ ನಂದಳಿಕೆ ಕೃಷ್ಣ ಶೆಟ್ಟಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಹಿಷ್ ಚೌಟ, ಮುಲ್ಕಿ ಠಾಣಾ ಉಪನಿರೀಕ್ಷಕ ವಿನಾಯಕ್ ತೋರಗಲ್ ರೋಟರಿ ಕ್ಲಬ್ ಅಧ್ಯಕ್ಷ ದೇವಿದಾಸ್ ಶೆಟ್ಟಿ, ನಡುಗೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ತಾರನಾಥ ಶೆಟ್ಟಿ, ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಮುಕ್ಕ, ರೇಶ್ಮ ಶೆಟ್ಟಿ, ಇನರ್ ವೀಲ್ ಅಧ್ಯಕ್ಷೆ ರೇಶ್ಮಾ, ವಿನಯ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/07/2022 07:20 pm