ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:"ಒಗ್ಗಟಿನ ಕೆಲಸವು ಜನರಿಗೆ ಉತ್ತಮ ಸೇವೆ ಕೊಡಲು ಸಾಧ್ಯ"

ಕಟೀಲು: ದುರ್ಗಾ ಸಂಜೀವಿನಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರಿನ ಕೆಎಂಸಿ ಅತ್ತಾವರದ ಹಿರಿಯ ವೈದ್ಯ ಹಾಗೂ ಸಾಮಾನ್ಯ ರೋಗ ತಜ್ಞ ಡಾ. ನಿತ್ಯಾನಂದ ಚೌಟ, ಸಾಮಾನ್ಯ ಶಸ್ತ್ರಚಿಕಿತ್ಸಾತಜ್ಞರಾದ ಡಾ. ಶಿವಾನಂದ ಪ್ರಭು ರವರನ್ನು ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಉತ್ತರಿಸಿ ಡಾ. ಶಿವಾನಂದ ಮಾತನಾಡಿ ಗ್ರಾಮೀಣ ಭಾಗದಲ್ಲಿ ಜನರ ಸೇವೆ ಮಾಡುವ ಅವಕಾಶ ಒದಗಿ ಬಂದಿರುವುದು ನಮ್ಮ ಭಾಗ್ಯವಾಗಿದ್ದು ಒಗ್ಗಟಿನ ಕೆಲಸವು ಜನರಿಗೆ ಉತ್ತಮ ಸೇವೆ ಕೊಡಲು ಸಾಧ್ಯ ಎಂದರು.

ಈ ಸಂದರ್ಭ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧೀಂದ್ರ ಕಾರ್ನಾಡ್, ಡಾ. ಅರುಣ್ ರಾವ್, ರಾಲ್ಫಿ ಡಿಸೋಜಾ, ಜೆಸ್ಸಿ ಸಿಸ್ಟರ್, ತಾರಾನಾಥ್ ಶೆಟ್ಟಿ ಉಪಸಿತರಿದ್ದರು ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

01/07/2022 02:49 pm

Cinque Terre

1.87 K

Cinque Terre

0

ಸಂಬಂಧಿತ ಸುದ್ದಿ