ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗೋಳಿಜೋರ, ಎಳತ್ತೂರು ದೇವಸ್ಥಾನ ತೆರಳುವ ರಸ್ತೆಗಳಲ್ಲಿ ಒಳಚರಂಡಿ ಕಾಮಗಾರಿ ಮಳೆಗಾಲ ಶುರುವಾಗುವಾಗ ಆರಂಭಿಸಿದ್ದು ರಸ್ತೆಗಳೆಲ್ಲ ಕೆಸರುಮಯವಾಗಿದೆ ಎಂದು ಸ್ಥಳಿಯ ನಾಗರಿಕರು ಆರೋಪಿಸಿದ್ದಾರೆ.
ಜೆಸಿಬಿ ಸಹಾಯದಿಂದ ಕೆಲಸ ನಡೆಸುತ್ತಿರುವ ಕಾರಣ, ಕೆಸರು ತುಂಬಿದ ಮಣ್ಣುಗಳನ್ನು ರಸ್ತೆ ಬದಿಗೆ ಹಾಕಲಾಗುತ್ತಿದೆ. ಹೀಗಾಗಿ ಧಾರಾಕಾರ ಮಳೆ ಸುರಿದರೆ ಕೆಸರು ತುಂಬಿಕೊಳ್ಳುವ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಓಡಾಟವೇ ದುಸ್ತರವಾಗುತ್ತಿದೆ.
ಮಳೆಗಾಲ ಆರಂಭವಾಗುವುದು ವರ್ಷದ ಹಿಂದೆಯೇ ಗೊತ್ತಿದ್ದರೂ, ಒಳಚರಂಡಿ ಕಾಮಗಾರಿಯನ್ನು ಈ ಹಿಂದೆಯೇ ಅಚ್ಚುಕಟ್ಟಾಗಿ ನಡೆಸಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿತ್ತೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಷ್ ಚೌಟ ಮಾತನಾಡಿ ಗೋಳಿಜೋರ ರಸ್ತೆಯಲ್ಲಿ ಖಾಸಗಿ ವ್ಯಕ್ತಿಗಳು ಚರಂಡಿ ಬ್ಲಾಕ್ ಮಾಡಿದನ್ನು ಸಣ್ಣ ಬಕೆಟ್ ಹಿಟಾಚಿ ಬಳಸಿ ಸರಿ ಪಡಿಸಲಾಗಿದೆ. ಸಿಬ್ಬಂದಿಗಳಿಂದ ರಸ್ತೆಯಲ್ಲಿ ಬಿದ್ದಿರುವ ಮಣ್ಣನ್ನು ತೆಗೆಯಲಾಗಿದೆ.ಚರಂಡಿ ಹೂಳೆತ್ತುವ ಕಾಮಗಾರಿ ಸದ್ರಿ ರಸ್ತೆಯಲ್ಲಿ ಮುಗಿದಿರುವುದರಿಂದ ಸಮಸ್ಯೆಯೂ ಬಗೆಹರಿಸಲು ಪಟ್ಟಣ ಪಂಚಾಯತಿ ಕ್ರಮ ಕೈಗೊಳ್ಳುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Kshetra Samachara
25/06/2022 07:24 pm