ಮಂಗಳೂರು: ನಗರದ ಹೊರವಲಯದ ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ಉತ್ತರ ಕ್ಷೇತ್ರದ ತಿರುವೈಲ್ ವಾರ್ಡಿನಲ್ಲಿ ನಾಗರಿಕ ಬಂಧುಗಳಿಗಾಗಿ ಉಚಿತ ಆಯ್ದ ಸರಕಾರಿ ಸೇವೆಗಳ ಶಿಬಿರವನ್ನು ಶಾಸಕರಾದ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು.
ವಾಮಾಂಜೂರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಭಾನುವಾರ ನಡೆದ ಶಿಬಿರದಲ್ಲಿ ಸ್ಥಳೀಯ ಕಾರ್ಪೋರೇಟರ್ ಹೇಮಲತಾ ರಘು ಸಾಲಿಯಾನ್, ಭಾಜಪಾ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಸಹಿತ ಗಣ್ಯರು, ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
19/06/2022 11:14 am