ಮುಲ್ಕಿ: ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಇತ್ತೀಚೆಗೆ ಜೀರ್ಣೋದ್ದಾರಗೊಂಡು ಯಶಸ್ವಿಯಾಗಿ ಬ್ರಹ್ಮಕಲಶೋತ್ಸವ ನಡೆದ ಉಡುಪಿ ಜಿಲ್ಲೆಯ ಸುಮಾರು ಒಂದುವರೆ ಸಾವಿರ ವರ್ಷ ಇತಿಹಾಸವಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಅರ್ಚಕ ರಾಧಾಕೃಷ್ಣ ಉಪಾಧ್ಯಾಯ ದೇವಸ್ಥಾನದ ವತಿಯಿಂದ ಶ್ರೀ ಚಂದ್ರಶೇಖರ ಸ್ವಾಮೀಜಿ ಯವರನ್ನು ಗೌರವಿಸಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.
ಈ ಸಂದರ್ಭ ಸ್ವಾಮೀಜಿಯವರು ದೇವಸ್ಥಾನದ ಪುನರ್ ನಿರ್ಮಾಣದ ಹಾಗೂ ದೇವಸ್ಥಾನದಲ್ಲಿ ವಿಶೇಷ ಮೆರುಗು ನೀಡಿ ಭಕ್ತಾದಿಗಳ ಗಮನ ಸೆಳೆಯುತ್ತಿರುವ ಸ್ವಾಗತ ಗೋಪುರದ ತಿರುಗುವ ಮುಚ್ಚಳಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು .
ಬಳಿಕ ಮಾಧ್ಯಮದ ಜೊತೆ ಮಾತನಾಡಿ ಅವಿಭಾಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ದೇವಸ್ಥಾನಗಳ ಜೀರ್ಣೋದ್ದಾರ ಅಭಿವೃದ್ಧಿಯ ಸಂಕೇತ ಎಂದರು.ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಸಂಧ್ಯಾ ಪ್ರಭು ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಸತೀಶ್ ಕುಲಾಲ್, ಸದಸ್ಯೆ ಭಾರತಿ ಚಂದ್ರಶೇಖರ್,, ಭದ್ರತಾ ಸಿಬ್ಬಂದಿ ಗಣೇಶ್ ಆಳ್ವಾ, ವಿನಯ್ ಶೆಟ್ಟಿ, ಜಗದೀಶ, ಪ್ರದೀಪ್ ಗೌಡ ಮತ್ತಿತರರು ಉಪಸ್ಥಿತರಿದ್ದರು.ಸಂಚಾಲಕ ಪುನೀತ್ ಕೃಷ್ಣ ನಿರೂಪಿಸಿದರು.
Kshetra Samachara
17/06/2022 11:25 am