ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ : ಸಾಧಕರಿಗೆ ಸಮ್ಮಾನ , ಧತ್ತಿ ನಿಧಿ,ಆರೋಗ್ಯ ನಿಧಿ, ಕಟ್ಟಡ ನಿಧಿ ಸಮರ್ಪಣಾ ಕಾರ್ಯಕ್ರಮ

ಮುಲ್ಕಿ: ಯುವಕ ಮಂಡಲಗಳು ಯುವಕರನ್ನು ಸಂಘಟಿಸುವುದರ ಜೊತೆಗೆ ಗ್ರಾಮದ ಅಭಿವೃದ್ಧಿ , ಸಮಾಜದ ಇತರರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಬೇಕೆಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತರಾಮ ಶೆಟ್ಟಿ ಹೇಳಿದರು.

ಪಕ್ಷಿಕೆರೆ ಗಣೇಶ್ ಕಲಾ ಮಂಟಪದಲ್ಲಿ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ.) ಆಶ್ರಯದಲ್ಲಿ ನಡೆದ ಸಾಧಕ ಸನ್ಮಾನ ಪ್ರತಿಭಾ ಪ್ರದರ್ಶನ

ದತ್ತಿ ನಿಧಿ ಮತ್ತು ಆರೋಗ್ಯ ನಿಧಿ ಕಟ್ಟಡ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ಅಧ್ಯಕ್ಷತೆ ವಹಿಸಿದ್ದರು

ವೇದಮೂರ್ತಿ ವಾಸುದೇವ ಭಟ್ ಪಂಜ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಯೋಧ ವಿಜಯ್ , ಕ್ರಿಯಾಶೀಲ ಪತ್ರಕರ್ತ ನಿಶಾಂತ್ ಶೆಟ್ಟಿ ಕಿಲೆಂಜೂರು, ಸಿಎಯಲ್ಲಿ ಸಾಧನೆ ಮಾಡಿದ ಕಿರಣ್ ಶೆಟ್ಟಿ ರವರನ್ನು ಗೌರವಿಸಲಾಯಿತು.

ಶಿಕ್ಷಣಕ್ಕೆ ಪೂರಕವಾಗಿ ಸುಜನ್ ವೈಷ್ಣವ್ ರವರಿಗೆ ಸಹಕಾರ ನೀಡಲಾಯಿತು. ವೈದ್ಯಕೀಯ ಚಿಕಿತ್ಸೆಗೆ ಪೀಟರ್ ಡಿಸೋಜ, ಹರೀಶ್ ಆಚಾರ್ಯ ಗೆ ಧನ ಸಹಾಯ ನೀಡಲಾಯಿತು. ಗಣೇಶೊತ್ಸವದ ಕಟ್ಟಡ ನಿಧಿಗೆ ಮಂಡಳಿಯಿಂದ 10 ಲಕ್ಷ ರೂ ಚೆಕ್‌ನ್ನು ನೀಡಲಾಯಿತು.ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶರತ್ ಶೆಟ್ಟಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಂಯೋಜಕಿ ಶುಭಲತಾ ಶೆಟ್ಟಿ , ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗಣಪತಿ ಆಚಾರ್ಯ, ರಾಜೇಶ್ ದಾಸ್ ಪ್ರಶಾಂತ್ ಶೆಟ್ಟಿಗಾರ್ ಹಾಗೂ ಮಂಡಳಿಯ ಸದಸ್ಯರು

ಉಪಸ್ಥಿತರಿದ್ದರು. ಮಿತ್ರ ಮಂಡಳಿಯ ಧನಂಜಯ ಪಿ. ಶೆಟ್ಟಿಗಾರ್ ಸ್ವಾಗತಿಸಿದರು. ಯಜ್ಞೆಶ್ ವಂದಿಸಿದರು. ಸುಮಂತ್ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

02/05/2022 02:45 pm

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ