ಮೂಡುಬಿದಿರೆ: ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಮೂಡುಬಿದಿರೆ ತಾಲೂಕು ಆಡಳಿತ ಸೌಧದ ನಿರ್ಮಾಣದ ಪ್ರಗತಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಪರಿಶೀಲಿಸಿದರು.
ನಾಡಕಛೇರಿ ಹಿಂಭಾಗದಲ್ಲಿ ಸುಮಾರು ಎರಡು ಎಕ್ರೆ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, 40 ಸಾವಿರ ಚದರ ಅಡಿಯಲ್ಲಿ ಸ್ಥಾಪಿತಗೊಳ್ಳುತ್ತಿದೆ. ಏ 27 ರಂದು ಕಟ್ಟಡವು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿಯವರಿಂದ ಲೋಕಾರ್ಪಣೆಗೊಳ್ಳಲಿದೆ.
ನೂತನ ಕಟ್ಟಡದಲ್ಲಿ ತಹಸೀಲ್ದಾರ್ ಕಚೇರಿ, ಶಾಸಕರ ಕಚೇರಿ, ಉಪನೊಂದಣಾಧಿಕಾರಿ, ಚುನಾವಣಾ ಕಛೇರಿ, ಸರ್ವೇ ಕಚೇರಿಗಳು ಇರಲಿವೆ. ಸಭಾಂಗಣ ಇವೆಲ್ಲ ಸಾಕಷ್ಟು ಗಾಳಿ, ಬೆಳಕು, ಜನರೇಟರ್, ಲಿಫ್ಟ್ ಮತ್ತು ಇತರ ಸೌಕರ್ಯಗಳೊಂದಿಗೆ ನೆಲೆಯಾಗಲಿವೆ. ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶವಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ರಸ್ತೆಯನ್ನು ಅಗಲಗೊಳಿಸಿ ನಿರ್ಮಿಸಲಾಗುತ್ತಿದೆ. ನ್ಯಾಯಾಲಯ, ಪ್ರವಾಸಿ ಮಂದಿರ, ಪುರಸಭೆ, ಆಸ್ಪತ್ರೆಗಳು, ಮೈದಾನ, ಮಾರುಕಟ್ಟೆ, ಬಿಇಒ ಕಚೇರಿ, ಹಲವು ವಾಣಿಜ್ಯ ಸಂಕೀರ್ಣಗಳು, ಪೆಟ್ರೋಲ್ ಬಂಕ್ ಕಾರ್ಯಾಚರಿಸುತ್ತಿರುವ, ನಗರ ನಡುವೆ ಈ ಸೌದ ನಿರ್ಮಾಣಗೊಂಡಿದೆ ವಿವರಿಸಿದರು.
ಆಡಳಿತ ಸೌಧ ಉದ್ಘಾಟನೆಯೊಂದಿಗೆ ಕ್ಷೇತ್ರದಲ್ಲಿ ನಡೆಯಲಿರುವ ಹಲವಾರು ಕಾರ್ಯಕ್ರಮಗಳಲ್ಲಿ ಕಂದಾಯ ಸಚಿವ ಆರ್. ಅಶೋಕ, ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ನೀರಾವರಿ ಸಚಿವ ಈಶ್ವರಪ್ಪ, ವಿವಿಧಜಿಲ್ಲೆಗಳ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ , ಸಂಸದ ನಳಿನ್ ಕುಮಾರ್ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಪುರಸಭಾಧ್ಯಕ್ಷ ಪ್ರಸಾದ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಮೂಡ ಅಧ್ಯಕ್ಷ ಮೇಘನಾದ ಶೆಟ್ಟಿ, ಪ್ರಮುಖರಾದ ಅಜಯ್ ರೈ, ಗೋಪಾಲ್ ಶೆಟ್ಟಿಗಾರ್, ಲಕ್ಷ್ಮಣ್ ಪೂಜಾರಿ, ಸಾತ್ವಿಕ್ ಮಲ್ಯ, ನಾರಾಯಣ ಶೆಟ್ಟಿ, ಪದ್ಮನಾಭ್ ಕೋಟ್ಯಾನ್, ಶಶಿಧರ್ ದೇವಾಡಿಗ, ಸಂತೋಷ್ ಅಂಚನ್, ಕಿಶೋರ್ ಉಪಸ್ಥಿತರಿದ್ದರು.
Kshetra Samachara
27/03/2022 08:59 am