ಮುಲ್ಕಿ: ಕಾರ್ನಾಡು ಶ್ರೀ ರಾಮ ಸೇವಾ ಮಂಡಳಿ ಆಶ್ರಯದಲ್ಲಿ ಕಾರ್ನಾಡು,ಮುಲ್ಕಿ ಪರಿಸರದ ಸ್ಥಳೀಯ ವೇಗತಡೆ(ಸ್ಪೀಡ್ ಬ್ರೆಕರ್)ಗೆ ಬಣ್ಣ ಬಳಿಯುವ ಕಾರ್ಯಕ್ರಮ ಕಾರ್ನಾಡುವಿನಲ್ಲಿ ನಡೆಯಿತು.
ಮಂಡಳಿಯ ಅಧ್ಯಕ್ಷರಾದ ಭಾಸ್ಕರ ಶೆಟ್ಟಿಗಾರ್ ಮಾತನಾಡಿ ಸಂಘಟನೆಯು ರಸ್ತೆ ಸುರಕ್ಷತೆಗೆ ಪ್ರಾಧಾನ್ಯತೆ ನೀಡುತ್ತಿದ್ದು ರಸ್ತೆಗಳಿಗೆ ಸುಣ್ಣ ಬಳಿಯುವ ಮೂಲಕ ಚಾಲಕರಿಗೆ ನಿಧಾನವಾಗಿ ಚಲಿಸಿ ಸುರಕ್ಷತೆಯಿಂದ ತಲುಪಿ ಅಮಾಯಕ ಜೀವಗಳನ್ನು ಉಳಿಸಿ ಎಂದು ಕಿವಿಮಾತು ಹೇಳಿದರು.
ಮುಲ್ಕಿ ನಪಂ ಸದಸ್ಯ ಹರ್ಷರಾಜ ಶೆಟ್ಟಿ,ವಿಶ್ವ ಹಿಂದೂ ಪರಿಷತ್ ಮುಲ್ಕಿ ಪ್ರಖಂಡ ಕಾರ್ಯದರ್ಶಿ ಶ್ಯಾಮ್ ಸುಂದರ್ ಶೆಟ್ಟಿ, ರಾಜೇಶ್ ಚಿತ್ರಾಪು,ಪ್ರಶಾಂತ್, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸತೀಶ್ ಶಿಮಂತೂರು, ಮತ್ತು ಮಂಡಳಿಯ ಸದಸ್ಯರುಗಳಾದ ಕೇಶವ್ ಸುವರ್ಣ ಸುನಿಲ್ ಕಾರ್ನಾಡು ಶಿವಾನಂದ ಹಾಗೂ ತನಿಷ್ ಕುಮಾರ್ ಉಪಸ್ಥಿತರಿದ್ದರು.
Kshetra Samachara
29/05/2022 03:35 pm