ಮಂಗಳೂರು: ನಗರದ ಹೊರವಲಯದ ಕುಂಜತ್ತಬೈಲಿನ ಗಾಂಧಿನಗರದ ದೋಟ ಸಂಪರ್ಕ ರಸ್ತೆಗೆ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರಿಟ್ ಕಾಮಗಾರಿಯನ್ನು ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಉದ್ಘಾಟಿಸಿದರು.
ಕುಲಾಲರ ಕರ್ಮರನ್ ಗೋತ್ರದ ನಾಗಮೂಲ ಧಾರ್ಮಿಕ ಸ್ಥಳಕ್ಕೆ ಬರಲು ರಸ್ತೆ ಸರಿಯಾದ ಇರಲಿಲ್ಲ. ಶಾಸಕರಲ್ಲಿ ಸಮುದಾಯದ ಮುಖಂಡರು ಈ ವಿಷಯ ಪ್ರಸ್ತಾಪಿಸಿದ ನಂತರ ಶಾಸಕರು ಮುತುವರ್ಜಿ ವಹಿಸಿ ರಸ್ತೆ ಕಾಮಗಾರಿ ನಡೆಸುವ ಮೂಲಕ ದೇವಾಲಯದ ಮೂಲಸೌಕರ್ಯ ಅಭಿವೃದ್ದಿಗೆ ವಿಶೇಷ ಪ್ರಾಶಸ್ತ್ಯ ನೀಡಿದ್ದನ್ನು ಅಭಿನಂದಿಸಿ ಕುಟೀರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು
ಸ್ಥಳೀಯರು ದೋಟ ರಸ್ತೆಯ ಉಳಿದ ಭಾಗದ ಕಾಮಗಾರಿ ನಡೆಸಲು ಶಾಸಕರಲ್ಲಿ ಮನವಿ ಮಾಡಿದಾಗ ಅದನ್ನು ಶೀಘ್ರದಲ್ಲಿ ಮಾಡಿಕೊಡುವುದಾಗಿ ಶಾಸಕರಾದ ಡಾ.ಭರತ್ ಶೆಟ್ಟಿಯವರು ತಿಳಿಸಿದರು.
ಪ್ರಕೃತಿವಿಕೋಪದಲ್ಲಿ ಹಾನಿಉಂಟಾದ ತಡೆಗೋಡೆ ನಿರ್ಮಿಸಲು ಶಾಸಕರು ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಸುಮಂಗಲ ರಾವ್, ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಕುಲಾಲರ ಕರ್ಮರನ್ ಗೋತ್ರದ ನಾಗಮೂಲ ದೈವಾಧಿಗಳ ಆಡಳಿತ ಟ್ರಸ್ಟ್ ಅಧ್ಯಕ್ಷರಾದ ನಾರಾಯಣ ಕುಲಾಲ್, ಟ್ರಸ್ಟ್ ಕಾರ್ಯದರ್ಶಿ ಲೋಕನಾಥ ಡಿ. ಹಾಗೂ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಾಂಧಿನಗರ ದೋಟ ಕುಠೀರದಲ್ಲಿ ರವಿವಾರ ಜರಗಿದ ಕುಲಾಲರ ಕರ್ಮರನ್ ಗೋತ್ರದ ನಾಗದೇವರ ವರ್ಷಾವಧಿ ಪೂಜೆ ಹಾಗೂ ದೈವಾದಿಗಳ ಕಾಲಾವಧಿ ಪರ್ವದಲ್ಲಿ ಕ್ಷೇತ್ರದ ಮಾನ್ಯ ಶಾಸಕರಾದ ಡಾ| ವೈ. ಭರತ್ ಶೆಟ್ಟಿ ಭಾಗವಹಿಸಿ ನಾಗದೇವರ ಹಾಗೂ ಪರಿವಾರ ದೈವಗಳ ಅರ್ಶೀವಾದ ಪಡೆದರು.
Kshetra Samachara
11/04/2022 11:00 am