ಮಂಗಳೂರು:ಕಲ್ಪನೆ ( ಬಿ.ಸಿ.ರೋಡು) ಯಿಂದ ಬೊಂಡಂತಿಲದ ತಾರಿಗುಡ್ಡೆಯಾಗಿ ಮಂಗಳೂರಿಗೆ ಸರಕಾರಿ ಬಸ್ ಸಾರಿಗೆ ವ್ಯವಸ್ಥೆಗೆ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಭಾನುವಾರ ಚಾಲನೆ ನೀಡಿದರು
ಈ ಭಾಗದಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದರು. ಈ ಬಗ್ಗೆ ಶಾಸಕ ಡಾ.ಭರತ್ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದರು. ಜನರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಕೆಎಸ್ ಆರ್ ಟಿಸಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ ಜನರ ಬೇಡಿಕೆ ಈಡೇರಿಸುವಲ್ಲಿ ಶ್ರಮಿಸಿದ್ದಾರೆ ತಮ್ಮ ಬಹುಕಾಲದ ನಿರೀಕ್ಷೆಯನ್ನು ಈಡೇರಿಸಿದ್ದಕ್ಕಾಗಿ ನಾಗರಿಕರು ಶಾಸಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗೋಪಾಲ್ ಪೂಜಾರಿ, ಚಂದ್ರಶೇಖರ್ ತಾರಿಗುಡ್ಡೆ, ಕೆಎಸ್ ಆರ್ ಟಿಸಿ ಅಧಿಕಾರಿಗಳು, ಗಣ್ಯರು, ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
30/01/2022 03:21 pm