ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಸ್ವಾವಲಂಬಿ ಬದುಕು ಸಂಘ-ಸಂಸ್ಥೆಗಳಿಂದ ಸಾಧ್ಯ: ದುಗ್ಗಣ್ಣ ಸಾವಂತರು

ಮುಲ್ಕಿ: ಹಳೆಯಂಗಡಿಯಲ್ಲಿ ನೂತನವಾಗಿ ಆರಂಭಗೊಂಡ ಪ್ರಿಯದರ್ಶಿನಿ ಸಹಕಾರ ಸಂಘ (ನಿ) ದಲ್ಲಿ ಇ-ಸ್ಟಾಂಪಿಂಗ್ (ಠಸೆ

ಪೇಪರ್) ಮಾರಾಟ ವಿಭಾಗ ಮತ್ತು ನೆಫ್ಟ್ ಆರ್ಟಿಜಿಎಸ್ ಸೌಲಭ್ಯಗಳ ಕಾರ್ಯಾರಂಭ ಸಂಘದ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ವಹಿಸಿ ಮಾತನಾಡಿ ಸೇವಾ ದೃಷ್ಟಿ ಮೂಲಕ ಜನರ ಸೇವೆ ಸಂಘದಿಂದ ಆಗಲಿ, ಸ್ವಾವಲಂಬಿ ಬದುಕು ಸಂಘಸಂಸ್ಥೆಗಳಿಂದ ಸಾಧ್ಯ ಎಂದರು

ಇ-ಸ್ಟಾಂಪಿಂಗ್ (ಠಸೆ ಪೇಪರ್) ಮಾರಾಟ ವಿಭಾಗ ಮತ್ತು ನೆಫ್ಟ್ ಆರ್ಟಿಜಿಎಸ್ ಸೌಲಭ್ಯಗಳನ್ನು ಮಾಜೀ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿ ಮಾತನಾಡಿ ಮಾಜಿ ಪ್ರಧಾನಿ ದಿ ರಾಜೀವ್ ಗಾಂಧಿಯವರು ಆಧುನಿಕ ಯುಗದ ಹರಿಕಾರನಾಗಿದ್ದು ನಾಗರಿಕರಿಗೆ ಕ್ಲಪ್ತ ಸೇವೆಗಳನ್ನು ಸಕಾಲದಲ್ಲಿ ಒದಗಿಸುವ ಮೂಲಕ ಸಂಘ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ರಾಜ್ಯ ಸಹಕಾರಿ ಪರಿಷತ್ತಿನ ಸಂಘಗಳ ನಿರ್ದೇಶಕರಾದ ಚಿತ್ತರಂಜನ್ ಬೋಳಾರ್, ಉದ್ಯಮಿ ಹರಿಶ್ಚಂದ್ರ ಕೆ.ಅಮೀನ್ , ಸಂಘದ ಅಧ್ಯಕ್ಷರಾದ ವಸಂತ್ ಬೆರ್ನಾಡ್, ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರುಗಳಾದ ಡಾ. ಗಣೇಶ್ ಅಮೀನ್ ಸಂಕಮಾರ್, ಧನಂಜಯ ಮಟ್ಟು, ಗೌತಮ್ ಜೈನ್, ಶರತ್ ಶೆಟ್ಟಿ, ಉಮಾನಾಥ್ ಜೆ. ಶೆಟ್ಟಿಗಾರ್, ಜೈ ಕೃಷ್ಣ ಕೋಟ್ಯಾನ್, ಗಣೇಶ್ ಪ್ರಸಾದ್ ದೇವಾಡಿಗ, ಧನ್ ರಾಜ್ ಕೋಟ್ಯಾನ್, ಮಿರ್ಜಾ ಅಹಮದ್, ಚಿರಂಜೀವಿ ಅಂಚನ್, ಶೆರಿಲ್ ಐಯೋನ ಐಮನ್, ಹರೀಶ್ ಎನ್. ಪುತ್ರನ್, ನವೀನ್ ಸಾಲ್ಯಾನ್, ಸಂದೀಪ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/09/2021 01:35 pm

Cinque Terre

1.87 K

Cinque Terre

0

ಸಂಬಂಧಿತ ಸುದ್ದಿ