ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಅಕ್ರಮ ಟೋಲ್ ಗೇಟ್ ತೆರವಿಗೆ ಪ್ರತಿಭಟನೆ ಆರಂಭ

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ಸಮೀಪದ ಎನ್ಐಟಿಕೆ ನಲ್ಲಿ ನಿರ್ಮಾಣಗೊಂಡ ಅಕ್ರಮ ಟೋಲ್ ಗೇಟ್ ತೆರವಿಗೆ ದಿನಾಂಕ ಘೋಷಣೆ ಆಗ್ರಹಿಸಿ ಸಾಮೂಹಿಕ ಪ್ರತಿಭಟನಾ ಧರಣಿ ಆರಂಭಗೊಂಡಿದ್ದು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸ್ಥಳದಲ್ಲಿ ಅಕ್ರಮ ಟೋಲ್ ಗೇಟ್ ವಿರುದ್ಧ ಪ್ರತಿಭಟನೆಗೆ ಬೃಹತ್ ಸಂಖ್ಯೆಯಲ್ಲಿ ಜನ ಜಮಾಾವಣೆಗೊಂಡಿದ್ದು ಭಾರಿ ಮಳೆ ನಡುವೆ ಪ್ರತಿಭಟನೆ ಮುಂದುವರೆದಿದೆ. ಮೊದಲಿಗೆ ಸಭೆಯಲ್ಲಿ ಟೋಲ್ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಅಕ್ರಮ ಟೋಲ್ ಕೂಡಲೇ ಮುಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಶಾಸಕ ಮೊಯುದ್ದೀನ್ ಭಾವ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ದಲಿತ ಸಂಘರ್ಷ ಸಮಿತಿಯ ಶೇಖರ್ ಹೆಜಮಾಡಿ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮತ್ತಿತರರು ಸ್ಥಳದಲ್ಲಿದ್ದು ಪ್ರತಿಭಟನೆ ಚಾಲನೆಗೊಂಡಿದೆ

Edited By : Shivu K
Kshetra Samachara

Kshetra Samachara

13/09/2022 12:31 pm

Cinque Terre

4.9 K

Cinque Terre

0

ಸಂಬಂಧಿತ ಸುದ್ದಿ